ಪ್ರಮುಖ ಸುದ್ದಿ
ದೇಶದಲ್ಲಿಯೇ ನೆರೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ-CM BSY
ಬೆಳಗಾವಿಃ ರಾಷ್ಟ್ರದಲ್ಲಿ ಅತಿ ಹೆಚ್ಚಿನ ಪರಿಹಾರ ಕೊಟ್ಟಂತ ಉದಾಹರಣೆ ಇಲ್ಲ, ನೆರೆ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದೇವೆ, ಕೊಡುತ್ತಿದ್ದೇವೆ. ಹಿಂದೆ ಮನೆ ಬಿದ್ದಲ್ಲಿ ಕಟ್ಟಿಕೊಳ್ಳಲು 95 ಸಾವಿರ ರೂ. ಮಾತ್ರ ಕೊಡಲಾಗುತಿತ್ತು. ಈಗ ನಾವು ಸಂಪೂರ್ಣ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ.ಕೊಡುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನೆ ಬಿದ್ದವರಿಗೆ ತಕ್ಷಣಕ್ಕೆ 10 ಸಾವಿರ ರೂ. ಕೊಡಲಾಗುತ್ತಿದೆ. ಪರಿಹಾರ ಸಮರ್ಪಕವಾಗಿ ನೀಡುತ್ತಿದ್ದೇವೆ. ಸದ್ಯಕ್ಕೆ ಎಲ್ಲಾ ಯೋಜನೆಗಳ ಹಣವನ್ನು ಪರಿಹಾರಕ್ಕೆ ನೀಯೋಜನೆ ಮಾಡುವ ಸ್ಥಿತಿ ಬಂದಿದೆ.
ಯಾವುದೇ ಸಾಲ ಮನ್ನಾದಂತ ಆದೇಶ ನೀಡುವ ಯೋಚನೆ ಇಲ್ಲ. ಈಗಲೇ ಸಾಕಷ್ಟು ಅನುದಾನವನ್ನು ವಿವಿಧ ಯೋಜನೆಗಳ ಮೂಲಕ ನೀಡಲಾಗುತ್ತಿದೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.