ಪ್ರಮುಖ ಸುದ್ದಿ
CM ಬೊಮ್ಮಾಯಿ ರೈತರ ಕ್ಷಮೆ ಕೇಳಲಿ – ಡಿಕೆ ಶಿವಕುಮಾರ
CM ಬೊಮ್ಮಾಯಿ ರೈತರ ಕ್ಷಮೆ ಕೇಳಲಿ – ಡಿಕೆ ಶಿವಕುಮಾರ
ಬೆಂಗಳೂರಃ ದೆಹಲಿಯಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ತಮ್ಮ ಹಕ್ಕಿಗಾಗಿ ರೈತರು ಹೋರಾಟ ನಡೆಸುತ್ತಿರುವದನ್ನು ಸಿಎಂ ಬಸವರಾಜ ಬೊಮ್ಮಾಯಿ ಅದೊಂದು ಪ್ರಾಯೋಜಿತ ಹೋರಾಟ ಎಂದು ಹೇಳುವ ಮೂಲಕ ರೈತರಿಗೆ ಅಪಮಾನ ಮಾಡಿದ್ದಾರೆ ಇದು ಆಘಾತಕಾರಿ ಹೇಳಿಕೆಯಾಗಿದ್ದು, ಕೂಡಲೆ ಸಿಎಂ ರೈತರ ಕ್ಷಮೆ ಕೇಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಆಗ್ರಹಿಸಿದರು.
ವಿಧಾನಸೌಧ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಮ್ಮ ಹಕ್ಕಿನ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ರೈತರನ್ನು ಕಡೆಗಣಿಸಿ ಮಾತನಾಡುವದು ಸರಿಯಲ್ಲ ಎಂದರು.
ರೈತರು ತಮ್ಮ ಹಕ್ಕಿನ ಕುರಿತು ಹೋರಾಟ ನಡೆಸುತ್ತಿದ್ದು, ನ್ಯಾಯಸಮ್ಮತವಾಗಿದೆ. ಆದರೆ ಇದುವರೆಗೂ ಸಿಎಂ ಅವರ ಕೇಂದ್ರ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ರೈತರ ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ ಎಂದು ಕಿಡಿಕಾರಿದರು.