ನಾನು ಪೆದ್ದನಂತೆ ಕಾಣುವದು ಸಹಜವೆಂದು ಶ್ರೀರಾಮುಲು ಅಂದಿದ್ಯಾಕೆ.?
ವಿವಿ ಡೆಸ್ಕ್ಃ ಮಾನ್ಯ ಸಿದ್ದರಾಮಯ್ಯನವರೇ, ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುವುದರಲ್ಲಿ, ನಂಬಿಸಿ ಕತ್ತು ಕೊಯ್ಯುವುದರಲ್ಲಿ, ತಾನು ಬೆಳೆಯಲು ಇನ್ನೊಬ್ಬನನ್ನು ನಾಶ ಮಾಡುವುದರಲ್ಲಿ ನಿಮ್ಮಂತೆ ನಾನು ಬುದ್ಧಿವಂತನಲ್ಲ. ಇನ್ನೊಬ್ಬರಿಗೆ ಅನ್ಯಾಯ ಮಾಡುವುದೇ ಬುದ್ಧಿವಂತಿಕೆ ಎನ್ನುವ ನಿಮಗೆ ನಾನು ಪೆದ್ದನಂತೆ ಕಾಣುವುದು ಸಹಜ ಎಂದು ಸಚಿವ ಶ್ರೀರಾಮುಲು ಸಿದ್ರಾಮಯ್ಯನವರನ್ನು ಕುರಿತು ಟ್ವಿಟ್ ಮಾಡುವ ಮೂಲಕ ಟೀಕಿಸಿದ್ದಾರೆ.
ಅಲ್ಲದೆ ಸಿದ್ರಾಮಯ್ಯ ಕಾಂಗ್ರೆಸ್ ನಲ್ಲಿ ಏಕಾಂಗಿಯಾಗಿರುವದು ಎಲ್ಲರಿಗೂ ಗೊತ್ತಿರುವ ವಿಷಯ ಮೇಲ್ನೋಟಕ್ಕೂ ಜನರಿಗೆ ತಿಳಿದಿದೆ. ಆದಾಗ್ಯು ಸಿದ್ರಾಮಯ್ಯನವರು ಅದನ್ನು ಮರೆಮಾಚಲು ಪ್ರಧಾನಿ ಮೋದಜೀ ಮತ್ತು ಅಮಿತ್ ಶಾ ಹೆಸರು ನಡುವೆ ಎಳೆತಂದು ತಾವು ದೊಡ್ಡವರಾಗುವ ಯೋಚನೆ ಮಾಡುತ್ತಿದ್ದಾರೆ ಎಂದು ಟ್ವಿಟರ್ ನಲ್ಲಿ ಕಿಚಾಯಿಸಿದ ಶ್ರೀರಾಮುಲು, ಮೊದಲು ಹಸೀ ಸುಳ್ಳು ಬಿಟ್ಟು ಸತ್ಯ ಹೇಳಿ. ಆಗದಿದ್ದರೆ ಸತ್ಯಕ್ಕೆ ಸಮೀಪವಾದರೂ ಮಾತನಾಡಿ. ಆಗ ಯಾರೂ ನಿಮ್ಮ ಮೇಲೆ ಮುಗಿಬೀಳುವುದಿಲ್ಲ. ಮುಗಿಬೀಳುತ್ತಾರೆ ಎಂಬ ಭಯವನ್ನು ನೀವು ಬಿಡಿ ಎಂದು ಬರೆದುಕೊಂಡಿದ್ದಾರೆ.