ಬದುಕಿನಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಿ ಚಂದ್ರಕಾಂತ ಹಿಳ್ಳಿ ಸಲಹೆ
ಸರ್ಕಾರಿ ಪಪೂ ಕಾಲೇಜು ಸ್ವಾಗತ ಸಮಾರಂಭ
ಶಹಾಪುರಃ ಶಿಸ್ತು, ತಾಳ್ಮೆಗಳಿಂದ ಸಹನಾ ಮನೋಭಾವನೆಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ಪ್ರತಿಭೆಗಳ ಸಾಧಕರಾಗಬೆಕು ಎಂದು ಯಾದಗಿರಿ ಜಿಲ್ಲಾ ಪದವಿ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಹಿಳ್ಳಿ ಕರೆ ನೀಡಿದರು.
ನಗರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಸ್ವಾಗತ ಸಮಾರಂಭ ಮತ್ತು ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆಗಳ ಎನ್ನೆಸೆಸ್ಸ್ ಘಟಕ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ಪಠ್ಯದ ಅಭ್ಯಾಸದ ಜೊತೆಗೆ ಸರ್ಕಾರದ ನಾನಾ ಯೋಜನೆಗಳ ತರಬೇತಿಗಳಲ್ಲಿ ಭಾಗವಹಿಸಿ ಶೈಕ್ಷಣಿಕವಾಗಿ ಪ್ರಗತಿ ಪಡೆದುಕೊಂಡು ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಪರಿಣಿತರಾಗಬೇಕು. ಹೆಚ್ಚು ಪರಿಶ್ರಮದಿಂದ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡು ಕಾಲೇಜಿಗೂ ಮತ್ತು ಪಾಲಕರ ಕೀರ್ತಿಗೆ ಪಾತ್ರರಾಗಬೇಕು ಎಂದರು.
ವಿಶೇಷ ಸನ್ಮಾನಿತರಾಗಿ ಆಗಮಿಸಿದ್ದ ಸಾಹಿತಿ ಚಂದ್ರಕಾಂತ ಕರದಳ್ಳಿ ಮಾತನಾಡಿ, ತಂದೆ ತಾಯಿ ಮತ್ತು ಗುರುವಿನ ಸ್ಥಾನ ಮಹತ್ವದದ್ದಾಗಿದು, ಮಕ್ಕಳು ಗುರು ಹಿರಿಯರನ್ನು ಗೌರವಿಸಬೇಕು. ವಿದ್ಯೆ ಕಲಿಸಿದ ಗುರುಗಳನ್ನು ಸದಾ ಸ್ಮರಿಸಬೇಕು. ಅವರು ಹೇಳಿ ಕೊಟ್ಟ ಆದರ್ಶ ಗುಣಗಳನ್ನು ಮಾನವೀಯತೆ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಬೇಕು ಎಂದು ಸಲಹೆ ನೀಡಿದರು.
ಸುರಪುರ ಖಜಾನೆ ಅಧಿಕಾರಿ ಡಾ.ಮೋನಪ್ಪ ಶಿರವಾಳ ಮತನಾಡಿ, ವಿದ್ಯಾ ನೀಡಿದ ಗುರುವನ್ನು ವಿದ್ಯಾರ್ಥಿಗಳು ನಿತ್ಯ ನನೆಯಬೇಕು. ಕಸಿದುಕೊಳ್ಳಲಾಗದ ವಿದ್ಯೆಯನ್ನು ನೀಡಿದ ಶ್ರೇಯಸ್ಸು ಗುರುವಿನದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಪೋಲಂಪಲ್ಲಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅಥಿತಿಗಳಾಗಿ ಕಲ್ಮಠ ಕಾಲೇಜಿನ ಉಪನ್ಯಾಸಕ ರಮೇಶ ಯಾಳಗಿ, ಉಪನ್ಯಾಸಕರಾದ ಎಂ.ಎಂ.ಹುಂಡೇಕಾರ, ಅಯ್ಯಣ್ಣ ಇನಾಂದಾರ್, ಧರ್ಮಣಗೌಡ ಬಿರೆದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ.ಅಬ್ದುಲ್ ಕರೀಂ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಗುರುಲಿಂಗಪ್ಪ ಸ್ವಾಗತಿಸಿ ನಿರೂಪಿಸಿದರು. ಭವಾನಿ ವಂದಿಸಿದರು.