ಸಿದ್ರಾಮಯ್ಯ ಸಂಧಾನ ಸಕ್ಸಸ್-ಎಂಟಿಬಿ ರಾಜೀನಾಮೆ ವಾಪಸ್
ಸಿದ್ರಾಮಯ್ಯ ಸಂಧಾನ ಸಕ್ಸಸ್-ಎಂಟಿಬಿ ವಾಪಸ್
ಎಂಟಿಬಿ ನಾಗರಾಜ ರಾಜಿನಾಮೆ ವಾಪಸ್ ಗೆ ಸಿದ್ಧ.!
ಬೆಂಗಳೂರಃ ಶಾಸಕ ಎಂಟಿಬಿ ನಾಗರಾಜ ಅವರನ್ನು ಮನವೊಲಿಸುವ ಮೂಲಕ ಮೈತ್ರಿ ಸರ್ಕಾರದ ಮೊದಲನೆ ಹೆಜ್ಜೆ ಯಶಸ್ವಿಯಾಗಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಎಂಟಿಬಿ ನಾಗರಾಜ, ಕಾಂಗ್ರೆಸ್ ನಾಯಕರ ಎಲ್ಲರ ಮನವಿ ಮೇರೆಗೆ ನಾನು ರಾಜಿನಾಮೆ ವಾಪಸ್ ಪಡೆಯಲಿಚ್ಚಿಸಿದ್ದೇನೆ.
ಕಾರಣಾಂತರಗಳಿಂದ ರಾಜಿನಾಮೆ ಸಲ್ಕಿಸಿದ್ದು ನಿಜ. ಈಗ ನಾಯಕರೆಲ್ಲರ ಮಾತಿಗೆ ಬೆಲೆ ಕೊಟ್ಟು ವಾಪಾಸ್ ಪಡೆಯುತ್ತಿದ್ದೇನೆ. ಕಾಂಗ್ರೆಸ್ ನಲ್ಲಿಯೇ ಉಳಿಯುತ್ತೇನೆ.
ಮತ್ತು ಚಿಕ್ಕಬಳ್ಳಾಪುರ ಶಾಸಕ ಸುಧಾಕರ ಅವರನ್ನು ಕರೆ ತರುವೆ ನಾವಿಬ್ಬರು ಕಾಂಗ್ರೆಸ್ ನಲ್ಲಿಯೇ ಉಳಿಯಲು ನಿರ್ಧರಿಸಿದ್ದೇವೆ.
ಶಾಸಕ ಸುಧಾಕರ ನಾನು ಇಬ್ಬರು ಮಾತಾಡಿಕೊಂಡಿದ್ದೇವು ಇದ್ರೆ ಇಲ್ಲಿ ಇಬ್ಬರು ಇರೋದು ಇಲ್ಲವಾದರೆ ರಾಜೀನಾಮೆ ನೀಡೋದು ಎಂದು. ಹೀಗಾಗಿ ನಾಳೆ ಸುಧಾಕರ ಅವರನ್ನು ವಾಪಾಸ್ ಕರಕೊಂಡು ಬಂದು ರಾಜಿನಾಮೆ ವಾಪಸ್ ಪಡೆಯುತ್ತೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಜೊತೆಯಲಿ ಮಾಜಿ ಸಿಎಂ ಸಿದ್ರಾಮಯ್ಯ, ಸಿಎಂ ಕುಮಾರಸ್ವಾಮಿ, ಡಿಕೆಶಿ, ಮಹಾದೇವಪ್ಪ ಇತರರಿದ್ದರು.