ಪ್ರಮುಖ ಸುದ್ದಿ
ಶಿವಶರಣ ಇಟಗಿ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಶಿವಶರಣ ಇಟಗಿ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಶಹಾಪುರಃ ತಾಲೂಕಿನ ನಾಗನಟಗಿ ಗ್ರಾಮದ ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಶಾಸಕ ದರ್ಶನಾಪುರ ಅವರ ಆಪ್ತ ಸಹಾಯಕ ಶಿವಶರಣ ಇಟಗಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡ ಶಿವಶರಣ ಇಟಗಿ ಅವರು, ಶಾಸಕರ ಅಭಿವೃದ್ಧಿ ಕಾರ್ಯ, ಜನಪರ ಕಾಳಜಿ ಮೆಚ್ಚಿ ನೂರಾರು ಜನ ಪಕ್ಷ ಸೇರ್ಪಡೆಯಾಗುತ್ತಾರೆ.
ನಾಗನಟಗಿ ಗ್ರಾಮದ ಬಿಜೆಪಿ ಮುಖಂಡರಾದ ಪಾಂಡುರಂಗ ದೇವದುರ್ಗ, ನಾಗಪ್ಪ ದೇವದುರ್ಗ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಮುಖಂಡರಾದ ಶಾಂತಗೌಡ, ಮುನಿಯಪ್ಪಗೌಡ, ಮಲ್ಲಿಕಾರ್ಜುನ, ಮಾಳಪ್ಪ ಮಾಲಹಳ್ಳಿ ಬಲವಂತ ನಾಗನಟಗಿ, ದೊಡ್ಮನಿ ಮಲ್ಲಪ್ಪ, ಮಾನಶಪ್ಪ ದೇವದುರ್ಗ, ನಿಂಗಪ್ಪ ಚಂದ್ಲಾಪುರ ಇದ್ದರು.