ಶಹಾಪುರ ಪ್ರೀಮಿಯರ್ ಲೀಗ್ ಕ್ರಿಕೇಟ್ ಟೂರ್ನಾಮೆಂಟ್
ಕ್ರಿಕೇಟ್ ಆಸಕ್ತರ ಗಮನ ಸೆಳೆದ ಟೂರ್ನಾಮೆಂಟ್
ಯಾದಗಿರಿ ಶಹಾಪುರಃ ನಗರದಲ್ಲಿ ಆಯೋಜಿಸಿರುವ ಪ್ರೀಮಿಯರ್ ಲೀಗ್ ಕ್ರಿಕೇಟ್ ಟೂರ್ನಾಮೆಂಟ್ ಉತ್ತಮವಾಗಿ ಆಯೋಜಿಸಿದ್ದು, ಶಿಸ್ತು ಬದ್ಧವಾಗಿ ಆಟಗಳು ನಡೆಯುತ್ತಿವೆ. ಇದರಿಂದ ಆಟಗಾರರಿಗೆ ಪ್ರೋತ್ಸಾಹ ದೊರೆಯಲಿದೆ ಅಲ್ಲದೆ ಉತ್ತಮ ಆಟಗಾರರ ಬೆಳವಣಿಗೆಗೆ ಇದೊಂದು ವೇದಿಕೆಯಾಗಿದೆ ಎಂದು ಜೆಸ್ಕಾಂ ತಾಲೂಕು ವಿಭಾಗ ಅಧಿಕಾರಿ ಎಕ್ಬಾಲ್ ಲೋಹಾರಿ ತಿಳಿಸಿದರು.
ನಗರದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಎಸ್‍ಪಿಎಲ್ ಕ್ರಿಕೇಟ್ ಟೂರ್ನಾಮೆಂಟ್ ನ ರವಿವಾರ ಬೆಳಗ್ಗೆ ನಡೆದ ಎಸ್‍ಜಿಎಸ್ ತಂಡ ವಿರುದ್ಧ ಸನ್‍ರೈಸ್ ತಂಡಗಳ ಆಟಕ್ಕೆ ಟಾಸ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲವು ಸಾಮಾನ್ಯ. ಆದರೆ ಕ್ರೀಡೆಯಲ್ಲಿ ಭಾಗವಹಿಸುವದು ಅತಿ ಮುಖ್ಯವಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿ ಪ್ರಾಮಾಣಿಕವಾಗಿ ನಿಮ್ಮ ಪ್ರದರ್ಶನ ನೀಡಿದಲ್ಲಿ ಮುಂದೆ ನಿಮ್ಮ ಬೆಳವಣಿಗೆಗೆ ಅದು ಸಹಾಯಕವಾಗಲಿದೆ.
ಕ್ರೀಡೆಯಲ್ಲಿ ಸ್ಪರ್ಧೆಯಲ್ಲಿ ಒಂದು ತಂಡ ಗೆಲವು ಸಾಧಿಸಲೇಬೇಕು ಅದರಂತೆ ವಿರುದ್ಧ ತಂಡ ಸೋಲಬೇಕಾಗುತ್ತದೆ.
ಇದೊಂದು ಸಾಮಾನ್ಯ ಪ್ರಕ್ರೀಯೆ. ಹೀಗಾಗಿ ಗೆಲವು ಸೋಲು ಎಂದು ನಗು ಮತ್ತು ನೋವು ಕಂಡುಕೊಳ್ಳುವದಕ್ಕಿಂತ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ಶಕ್ತಿ ಮೀರಿ ಪ್ರದರ್ಶನ ಮಾಡಿರುವದನ್ನು ಜನ ಗಮನಿಸಿರುತ್ತಾರೆ ಅದು ಬಹು ಮುಖ್ಯವಾಗಿದೆ ಎಂದರು.
ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಎಸ್‍ಜಿಎಸ್ (ಶಿವಶೇಖರಪ್ಪಗೌಡ ಶಿರವಾಳ ತಂಡ) 3 ವಿಕೆಟ್‍ಗೆ 140 ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಸವಾಲೆಸೆಯಿತು. ವಿರುದ್ಧ ಸೈನ್ ರೈಸ್ ತಂಡ 6 ವಿಕೇಟ್‍ಗೆ ಕೇವಲ 122 ರನ್ ಸಾಧಿಸುವ ಮೂಲಕ ಸುಲಭ ಸೋಲೊಪ್ಪಿಕೊಂಡಿತು. ಹೀಗಾಗಿ 18 ರನ್‍ಗಳಿಂದ ಎಸ್‍ಜಿಎಸ್ ತಂಡ ಜಯಸಾಧಿಸಿತು.