ಕೊರೊನಾ ತಡೆಗೆ ಅಮ್ಮ ಟ್ರಸ್ಟ್ ಕೈಗೊಂಡ ಕಾರ್ಯ ಶ್ಲಾಘನೀಯ- ಸೋಮನಾಳ
36ನೇ ಪುಣ್ಯಸ್ಮರಣೆ ಅಂಗವಾಗಿ ನಗರದಾದ್ಯಂತ ಸ್ಯಾನಿಟೈಸ್ ಮಾಡಿಸಿದ ಟ್ರಸ್ಟ್
yadgiri-ಶಹಾಪುರಃ ಎಲ್ಲಡೆ ಕೊರೊನಾ ಸೋಂಕು ಹರಡುವಿಕೆ ಜಾಸ್ತಿಯಾಗುತ್ತಿದ್ದು, ಅದರ ತಡೆಗೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರ ನಿಯಂತ್ರಣಕ್ಕೆ ನಾಗರಿಕರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕೆಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ತಿಳಿಸಿದರು.
ದಿ.ಲಕ್ಷ್ಮೀದೇವಿ ಅವರ 36 ನೇ ಪುಣ್ಯಸ್ಮರಣೆ ಅಂಗವಾಗಿ ಮಣಿಕಂಠ ಅಮ್ಮ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡ ನಗರದಾದ್ಯಂತ ಸ್ಯಾನಿಟೈಸ್ ಮಾಡುವ ಯಂತ್ರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು.ಕೈಲಾದ ಸಹಾಯ ಸಹಕಾರ ನೀಡುವ ಅಗತ್ಯವಿದೆ. ಎಲ್ಲದಕ್ಕಝೂ ಮುಂಚಿತವಾಗಿ ಸರ್ಕಾರ ಸೂಚಿಸಿದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಅಮ್ಮ ಟ್ರಸ್ಟ್ ಪಟ್ಟಣದಲ್ಲಿ ಎರಡು ಟ್ರ್ಯಾಕ್ಟರ್ ಮೂಲಕ ಇಡಿ ನಗರ ಸ್ಯಾನಿಟೈಸ್ ಮಾಡುತ್ತಿರುವುದ ಶ್ಲಾಘನೀಯವಾಗಿದೆ. ಪುಣ್ಯ ಸ್ಮರಣೆ ಅಂಗವಾಗಿ ಪ್ರಸ್ತುತ ಇದು ಉತ್ತಮ ಕಾರ್ಯವಾಗಿದೆ ಎಂದರು.
ಮುಖಂಡರಾದ ಅಮರೀಶಗೌಡ ದರ್ಶನಾಪುರ, ತಹಶೀಲ್ದಾರ ಜಗನ್ನಾಥರಡ್ಡಿ, ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ, ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ಸೇರಿದಂತೆ ಟ್ರಸ್ಟ್ನ ಪದಾಧಿಕಾರಿಗಳು ಭಾಗವಹಿಸಿದ್ದರು.
ನಗರದ ದಿಗ್ಗಿ ಬೇಸ್, ಗಾಂಧಿಚೌಕ, ಮೋಚಿಗಡ್ಡಾ, ಹಳಿಸಗರ ಸೇರಿದಂತೆ ಪೊಲೀಸ್ ಠಾಣೆ ಮತ್ತು ಸರ್ಕಾರಿ ಆಸ್ಪತ್ರೆ ಇತರಡೆ ಬಡಾವಣೆಯಲ್ಲಿ ಎರಡು ಟ್ರ್ಯಾಕ್ಟರ್ಗಳು ಸ್ಯಾನಿಟೈಸ್ ದ್ವರಣದ ಮೂಲಕ ಸಿಂಪರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಮ್ಮ ಕ್ಯಾಂಟೀನ್ ಮಾಲೀಕ ಗುರು ಮಣಿಕಂಠ, ಅರವಿಂದ ಉಪ್ಪಿನ್, ಅವಿನಾಶ ಗುತ್ತೇದಾರ, ಮಲ್ಲಿಕಾರ್ಜುನ ಆಲೂರ, ಸಿದ್ದು ಆನೇಗುಂದಿ, ರಾಜೂ ಆನೇಗುಂದಿ ಇತರರು ಇದ್ದರು.