ಪ್ರಮುಖ ಸುದ್ದಿ
ಕಾಂಗ್ರೆಸ್ಸಿಗರು ನಮ್ರತೆ & ಪ್ರಾಮಾಣಿಕತೆಯಿಂದ ಪಾಠ ಕಲಿಯಿರಿ – ಸೋನಿಯಾಗಾಂಧಿ
ಕಾಂಗ್ರೆಸ್ಸಿಗರು ನಮ್ರತೆ & ಪ್ರಾಮಾಣಿಕತೆಯಿಂದ ಪಾಠ ಕಲಿಯಲಿ – ಸೋನಿಯಾಗಾಂಧಿ
ನವದೆಹಲಿಃ ಇತ್ತಿಚೆಗೆ ನಡೆದ ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ತುಂಬಾ ನಿರಾಶದಾಯಕವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ತಿಳಿಸಿದರು.
ಶುಕ್ರವಾರ ಪಕ್ಷದ ಸಂಸದರೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ತೀವ್ರ ಹಿನ್ನೆಡೆ ಅನುಭವಿಸಿರುವದನ್ನು ಪಕ್ಷದ ಸದಸ್ಯರು ನಮ್ರತೆ ಮತ್ತು ಪ್ರಾಮಾಣಿಕ ಮನೋಭಾವದಿಂದ ಪಾಠ ಕಲಿಯಬೇಕು ಎಂದು ಸಲಹೆ ನೀಡಿದರು.
ಇದೇ ವೆಳೆ ಚುನಾವಣೆಯಲ್ಲಿ ಜಯಗಳಿಸಿದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಸೇರಿದಂತೆ ಎಡಪಕ್ಷಗಳ ಮುಖಂಡರಿಗೆ ಅಭಿನಂದನೆ ವ್ಯಕ್ತಪಡಿಸಿದರು.