ಪೌರತ್ವಃ ಪ್ರತಿಭಟನೆ ಹಿಂಪಡೆದ ಕಾಂಗ್ರೆಸ್ ನಾಯಕರು.!
ಪೌರತ್ವಃ ಪ್ರತಿಭಟನೆ ಹಿಂಪಡೆದ ಕಾಂಗ್ರೆಸ್ ನಾಯಕರು.!
ಶಿವಮೊಗ್ಗಃ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ರಾಜ್ಯದ ಹಲವಡೆ ವಿವಿಧ ಸಂಘಟನೆಗಳಿಂದ ಪ್ರರಿಭಟನೆಯ ತೀವ್ರತೆ ಹೆಚ್ವಾಗಿದೆ.
ಪ್ರತಿಭಟನೆ ತಿವ್ರತೆ ಕಂಡು ಹಲವು ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ನಿಷೇಧಾಜ್ಞೆ ಜಾರಿಗೊಳಿಸಿದೆ.
ಆದರೆ ಶಿವಮೊಗ್ಗದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಇಲ್ಲಿನ ಕಾಂಗ್ರೆಸ್ ನಾಯಕರು ವಾಪಸ್ ಪಡೆದುಕೊಂಡ ಘಟನೆ ನಡೆದಿದೆ.
ಪ್ರತಿಭಟನೆ ಯಿಂದ ಕಾಂಗ್ರೆಸ್ ಹಿಂದೇಟು ಯಾಕೆ.?
ಎಲ್ಲಡೆ ಪೌರತ್ವ ಕಾಯ್ದೆ ಜಾರಿ ಜ್ವರ ಹಬ್ಬಿದ್ದು, ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಗೃಹ ಇಲಾಖೆ ನಿಷೇದಾಜ್ಞೆ ಹೊರಡಿಸಿದೆ. ಅಲ್ಲದೆ ಬಿಗಿ ಬಂದೋಬಸ್ತ್ ಕೈಗೊಂಡಿದೆ.
ಈ ಮೊದಲು ಇಲ್ಲಿನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಜಿಲ್ಲಾಧ್ಯಕ್ಷ ಸುಂದರೇಶ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ ರಾಜ್ಯದಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಿರುವದರಿಂದ ಪ್ರತಿಭಟನೆ ವಾಪಾಸ್ ಪಡೆಯಲಾಗಿದೆ ಎಂದು ಕಾಂಗ್ರೆಸ್ ನಾಯಕರು ಸಮಜಾಯಿಷಿ ನೀಡಿದ್ದಾರೆ. ಆದರೆ ಸ್ಥಳದಲ್ಲಿ ಸೇರಿದ್ದ ಕಾರ್ಯಕರ್ತರು ಪ್ರತಿಭಟನೆ ಕೈಗೊಳ್ಳುವಂತೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಘಟನೆಯು ಜರುಗಿತು.