ಯಾದಗಿರಿ ಲಾಕ್ ಡೌನ್ ಆದೇಶ ವಾಪಸ್..!
ಯಾದಗಿರಿ ಲಾಕ್ ಡೌನ್ ಆದೇಶ ವಾಪಸ್..!
ಯಾದಗಿರಿಃ ಜಿಲ್ಲೆಯಾದ್ಯಂತ ಲಾಕ್ ಡೌನ್ ಜುಲೈ 29 ರವರೆಗೆ ಮುಂದುವರೆಸಿ ಆದೇಶ ನೀಡಿದ‌್ದ ಬೆನ್ನ ಹಿಂದೆಯೇ ಡಿಸಿ ಕೂರ್ಮಾರಾವ್ ಆದೇಶ ವಾಪಸ್ ಪಡೆದಿದ್ದು ಲಾಕ್ ಡೌನ್ ಜಾರಿ ಆದೇಶ ರದ್ದುಪಡಿಸಿರುವ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇತ್ತ ಯಾದಗಿರಿ ಲಾಕ್ ಡೌನ್ ಮುಂದುವರೆಸಿ ಆದೇಶ ನೀಡುವ ವೇಳೆಗೆ ಅತ್ತ ಸಿಎಂ ಫೇಸ್ ಬುಕ್ ಲೈವ್ ಮೂಲಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಯಾವುದೇ ಭಾಗದಲ್ಲಿ ಇನ್ಮುಂದೆ ಲಾಕ್ ಡೌನ್ ಜಾರಿಗೊಳಿಸುವದಿಲ್ಲ. ಈ ಕುರಿತು ಆಯಾ ಜಿಲ್ಲಾಧಿಕಾರಿ ಗಳ ಜೊತೆ ಮಾತನಾಡುವೆ ಎಂದಿದ್ದರು.
ಅಲ್ಲದೆ ಲಾಕ್ ಡೌನ್ ನಿಂದ ಮಾತ್ರ ಕೊರೊನಾ ತಡೆ ಸಾಧ್ಯವಿಲ್ಲ. ಎಲ್ಲರೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಆಗಾಗ ಕೈತೊಳೆಯಬೇಕು ಸೇರಿದಂತೆ 60 ವರ್ಷಕ್ಕಿಂತ ಮೆಲ್ಪಟ್ಟವರು ವಯಸ್ಸಾದವರು ಇತರೆ ಕಾಯಿಲೆ ಹೊಂದಿದವರಾರು ಹೊರಗಡೆ ಬರಬಾರದು.
ಅನಗತ್ಯ ಒಡಾಟ ಸಲ್ಲದು ಆರೋಗ್ಯ ಇಲಾಖೆ ನೀಡಿದ ಮುನ್ನೆಚ್ಚರಿಕೆಗಳನ್ನು ಎಲ್ಲರುವಹಿಸಬೇಕು ಎಂದು ಮನವಿ ಮಾಡಿದ್ದರು. ಈ ಕುರಿತು ಜಿಲ್ಲಾಡಳಿತಕ್ಕೆ ಇದೀಗ ಮಾಹಿತಿಬಂದಿರುವ ಹಿನ್ನೆಲೆ ಲಾಕ್ ಡೌನ್ ಆದೇಶ ಹಿಂಪಡೆದಿದ್ದಾರೆ ಎನ್ನಲಾಗಿದೆ.
ವಿನಯವಾಣಿ ಸುದ್ದಿ ಓದಿ ಹಲವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸಿಎಂ ಹೇಳಿಕೆ ಮತ್ತು ಯಾದಗಿರಿ ಜಿಲ್ಲೆ ಲಾಕ್ ಡೌನ್ ವಿಸ್ತರಣೆ ಗೊಂದಲ ಕುರಿತು ಪ್ರಸ್ತಾಪಿಸಿದ ಹಿನ್ನೆಲೆ, ಜಿಲ್ಲಾಧಿಕಾರಿಗಳು ಇದೀಗ ಮಾಹಿತಿ ಪಡೆದಿದ್ದು, ಲಾಕ್ ಡೌನ್ ವಿಸ್ತರಣೆ ವಾಪಸ್ ಪಡೆಯಲಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಪತ್ರಕರ್ತ ಪ್ರಹ್ಲಾದ್ ತಿಳಗೂಳ, ಸಾಮಾಜಿಕ ಕಾರ್ಯಕರ್ತ, ಮುಖಂಡ ಟಿ.ಶಶಿಧರ ವಿನಯವಾಣಿಗೆ ಕರೆ ಮಾಡಿ ವಿಷಯ ಹಂಚಿಕೊಂಡರು.