ಪ್ರಮುಖ ಸುದ್ದಿ
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ ಅಶೋಕ ಕುಮಾರ್
ಯಾದಗಿರಿಃ ಬೀ ರಿಪೋರ್ಟ್ ವರದಿಯನ್ನು ನೀಡುವುದಕ್ಕೆ ಲಂಚ ಬೇಡಿಕೆಯಿಟ್ಟದ ದ್ವೀತಿಯ ದರ್ಜೆ ಸಹಾಯಕ ಅಶೋಕ ಕುಮಾರನನ್ನು ಎಸಿಬಿ ಅಧಿಕಾರಿಗಳು ಖೆಡ್ಡಾಗೆ ಬೀಳಿಸಿದ್ದಾರೆ. ಎಸ್ಡಿಸಿ ಅಶೋಕಕುಮಾರ ನಗರದ ತಹಸೀಲ್ ಕಚೇರಿಯಲ್ಲಿಯೇ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಆತನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಸಿದ್ದು ಪೂಜಾರಿ ಎಂಬುವರಿಗೆ ಬಿ.ರಿಪೋರ್ಟ ನೀಡಲು ಆತ 4 ರಿಂದ 5 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ. ಬೇಸತ್ತ ಸಿದ್ದು, ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಎಸಿಬಿ ಡಿವೈಎಸ್ಫಿ ವೀರೇಶ ಕರಡಿಗುಡ್ಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿ ಅಶೋಕನನ್ನು ವಶಕ್ಕೆ ಪಡೆದುಕೊಂಡು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
4000 ಸಾವಿರ ಲಂಚ ಬೇಡಿಕೆಯ ಮುಂಗಡ 2500 ರೂ. ಅಶೋಕ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿ ತಂಡ ದಾಳಿ ನಡೆಸಿದೆ. ಈ ಕುರಿತು ಆರೋಪಿಯನ್ನು ತೀವ್ರ ತನಿಖೆಗೊಳಪಡಿಸಲಾಇದೆ ಎಂದು ಅಧಿಕಾರಗಳು ತಿಳಿಸಿದ್ದಾರೆ.