ಪ್ರಮುಖ ಸುದ್ದಿ
ಮಹಾರಾಷ್ಟ್ರಃ ಮತ್ತೆ ಲಾಕ್ ಡೌನ್, ರಾತ್ರಿ ಕರ್ಫ್ಯೂ
ಮಹಾರಾಷ್ಟ್ರದ ಸಂಭಾಜಿ ನಗರ ಶನಿವಾರ, ರವಿವಾರ ಲಾಕ್ ಡೌನ್
ವಿವಿ ಡೆಸ್ಕ್ಃ ಮಹಾರಾಷ್ಟ್ರ ದ ಹಲವಡೆ ಕೊರೊನಾ ಪ್ರಕರಣಗಳು ದಿನೆ ದಿನೇ ಮತ್ತೆ ಜಾಸ್ತಿಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 35 ಜನರು ಸಾವನ್ನಪ್ಪಿದ್ದಾರೆ.
ಕೊರೊನಾ ಹಾವಳಿ ಮತ್ತೆ ಜಾಸ್ತಿಯಾಗುತ್ತಿರುವ ಹಿನ್ನೆಲೆ ಸಾಂಭಾಜಿ ನಗರದಲ್ಲಿ ಮಾರ್ಚ್ 11 ರಿಂದ ಏಪ್ರೀಲ್ 11 ವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದು, ಅಲ್ಲದೆ ಶನಿವಾರ ಮತ್ತು ರವಿವಾರ ಫುಲ್ ಲಾಕ್ ಡೌನ್ ಜಾರಿಗೊಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.
ಮತ್ತು ಈ ವೇಳೆ ಶಾಲಾ ಕಾಲೇಜು ಸಭೆ ಸಮಾರಂಭಗಳು ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೊರೊನಾ ಕಡಿಮೆಯಾಗಿದೆ ಎನ್ನುವಷ್ಟರಲ್ಲಿ ಮತ್ತೆ ಅದರ ಹಾವಳಿ ತೀವ್ರತೆ ಪಡೆದುಕೊಳ್ಳುತ್ತಿದೆ.
ಹೀಗಾಗಿ ಮತ್ತೆ ಜನರಲ್ಲಿ ಆತಂಕ ಶುರುವಾಗಿದೆ. ಆದಷ್ಟು ಎಚ್ಚರಿಕೆವಹಿಸಿ ಕೊರೊನಾ ನಿಯಮಾವಳಿ ಪಾಲಿಸುವದು ಸೂಕ್ತ.