ಕೊರೊನಾ ಚಿಂತೆ ಬೇಡ ಚಿಂತನೆ ಮಾಡಿ- ಕಾಮಾ
ಕೊರೊನಾಃ ನಾಗರಿಕರಲ್ಲಿ ಜಾಗೃತಿ, ಮಾಸ್ಕ್ ವಿತರಣೆ
ಯಾದಗಿರಿ, ಶಹಾಪುರಃ ನಾಗರಿಕರಲ್ಲಿ ಆತಂಕ ಮೂಡಿಸಿರುವ ಕೊರೊನಾ ವೈರಸ್ ಬಗ್ಗೆ ಭಯ ಭೀತಿಯಲ್ಲಿ ಮುಳುಗಿ ಚಿಂತೆಗೀಡಾಗುವದನ್ನು ಬಿಟ್ಟು, ಬಂದ ಸಮಸ್ಯೆಯನ್ನು ಎದುರಿಸುವ ಚಿಂತನೆ ಕೈಗೊಂಡು ವೈರಸ್ ಬಾರದಂತೆ ಎಚ್ಚರಿಕೆವಹಿಸಬೇಕೆಂದು ನಾಗರಿಕ ಹೋರಾಟ ಸಮಿತಿ ಮುಖಂಡ ಗುರು ಕಾಮಾ ತಿಳಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ನಾಗರಿಕ ಹೋರಾಟ ಸಮಿತಿ ಕೈಗೊಂಡ ಸಾರ್ವಜನಿಕರಲ್ಲಿ ಕೊರೊನಾ ಕುರಿತು ಜಾಗೃತಿ ಮತ್ತು ಮಾಸ್ಕ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಹಲವಡೆ ಕೆಲವರಲ್ಲಿ ಶಂಕಿತ ವೈರಾಣು ಇದೆ ಎಂಬ ಸುದ್ದಿ ಹರಡಿದೆ. ಆದರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೇಳಿಕೆ ಪ್ರಕಾರ ಯಾವುದೇ ಕೊರೊನಾ ವೈರಸ್ ಇದುವರೆಗೂ ಪಾಸಿಟಿವ್ ಕಂಡು ಬಂದಿಲ್ಲ. ಅನ್ಯ ದೇಶಗಳಲ್ಲಿ ತೀವ್ರತೆ ಪಡೆದುಕೊಂಡ ಕೊರೊನಾ ವೈರಸ್ ತಲ್ಲಣ ಮೂಡಿಸಿದೆ. ಬೇರೆ ದೇಶಗಳಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದರೆ ನಮ್ಮ ದೇಶಕ್ಕೆ ಕಾಲಿಟ್ಟ ಕೊರೊನಾ ವೈರಸ್ ನಮ್ಮ ದೇಶದಲ್ಲಿ ಪಾಸಿಟಿವ್ ಆಗಿ ಬಂದ ಯಾವುದೇ ಒಂದು ರೋಗಿಯು ಪತ್ತೆಯಾಗಿಲ್ಲ. ಆದಾಗ್ಯು ಮುನ್ನೆಚ್ಚರಿಕೆಯಾಗಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ ಎಂದರು.
ಕೊರೋನಾ ವೈರಸ್ ಹರಡದಂತೆ ಎಚ್ಚರಿಕವಹಿಸಲು ವೈದ್ಯರ, ಪರಿಣಿತರ ಕೆಲವು ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದರು. ಮಸ್ಕ್ ಧರಿಸುವದು, ಸದಾ ಸ್ವಚ್ಛತೆಯಿಂದ ಕೂಡಿರಬೇಕು. ತಾಸಿಗೊಮ್ಮೆ ಕೈ ತೊಳೆದುಕೊಳ್ಳಬೇಕು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಟಿಎಚ್‍ಓ ಡಾ.ರಮೇಶ ಗುತ್ತೇದಾರ, ಡಾ.ಮಲ್ಲಪ್ಪ, ನಗರಸಭೆ ಆಯುಕ್ತ ಬಸವರಾಜ ಶಿವಪೂಜೆ, ತಹಶೀಲ್ದಾರ ಜಗನ್ನಾಥ ರಡ್ಡಿ ಸೇರಿದಂತೆ ಸಮಿತಿ ಮುಖಂಡರಾದ ಸಯ್ಯದ್ ಖಾದ್ರಿ, ಅಮಾತೆಪ್ಪ, ರಜಾಕ್ , ಶೇಖ ಖಲಿಂ, ಸಾಯಬಣ್ಣ, ಬಸ್ಸು ಇತರರಿದ್ದರು.