GOOD NEWS- ಇನ್ನೆರಡು ತಿಂಗಳಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯ.?
GOOD NEWS- ಇನ್ನೆರಡು ತಿಂಗಳಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯ.?
ವಿವಿ ಡೆಸ್ಕ್ಃ ಪ್ರಪಂಚದಾದ್ಯಂತ ಕೊರೊನಾ ಆರ್ಭಟ ಮುಂದುವರೆದಿದ್ದು, ಕೊರೊನಾ ಸೋಂಕಿಗೆ ಇನ್ನೆರಡು ತಿಂಗಳಲ್ಲಿ ವ್ಯಾಕ್ಸಿನ್ ದೊರೆಯಲಿದೆ ಎಂದು ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ
ಮಾಧ್ಯಮವೊಂದಕ್ಕೆ ಅಭಿಪ್ರಾಯ ಹಂಚಿಕೊಂಡ ಅವರು, ಈಗಾಗಲೇ ಹಲವಾರು ಜನರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಲಾಗಿದೆ.
ಯಾವುದೇ ವ್ಯಾಕ್ಸಿನ್ ಸಂಶೋಧನೆಗೆ ಸುಮಾರು ಎರಡು ವರ್ಷಗಳು ಬೇಕಾಗುತ್ತದೆ. ಕೊರೊನಾ ಸೋಂಕು ಕಂಡು ಬಂದ ತಕ್ಷಣದಿಂದಲೇ ಸಂಶೋಧನೆ ಆರಂಭವಾಗಿದೆ. 6 ಸಾವಿರ ಸಂಶೊಧಕರು ವ್ಯಾಕ್ಸಿನ್ ಸಂಶೋಧನೆ ಮಾಡುತ್ತಿದ್ದಾರೆ.
ಎಡ್ವರ್ಡ್ ಜನ್ನರ್ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆಯುತಿದ್ದು, ಈಗಾಗಲೇ ಎರಡನೇ ಹಂತಮುಗಿದು, ಮೂರನೇಯ ಹಂತದ ಪ್ರಯೋಗ ನಡೆಯುತ್ತದೆ. 2 ಸಾವಿರ ರೂ.ದರದಲ್ಲಿ ವ್ಯಾಕ್ಸಿನ್ ದೊರೆಯಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ವ್ಯಾಕ್ಸಿನ್ ದೊರೆಯುವವರೆಗೂ ಜನರು ಮುಂಜಾಗೃತೆವಹಿಸಿ ಕೊರೊನಾ ತಡೆಗೆ ಸರ್ಕಾರ ಕೈಗೊಂಡ ನಿಮಯಮಗಳನ್ನು ಪಾಲನೆ ಮಾಡಬೇಕು ಎಂದಿದ್ದಾರೆ.