ಶಹಾಪುರಃ ಸಮಸ್ಯೆ ಪರಿಹಾರಕ್ಕೆ ಕಾಟನ್ ಮಿಲ್ ಮಾಲೀಕರಿಂದ ಮನವಿ
ಕಾಟನ್ ಮಿಲ್‍ಗಳ ಮಾಲೀಕರಿಂದ ಸಚಿವರ ಭೇಟಿ
ಕಾಟನ್ ಮಿಲ್‍ಗಳ ಮಾಲೀಕರಿಂದ ಸಚಿವರ ಭೇಟಿ
ಸಮಸ್ಯೆ ಪರಿಹಾರಕ್ಕೆ ಕಾಟನ್ ಮಿಲ್ ಮಾಲೀಕರಿಂದ ಮನವಿ
yadgiri, ಶಹಾಪುರಃ ಜಿಲ್ಲೆಯಾದ್ಯಂತ ಕಾಟನ್ ಮಿಲ್‍ಗಳು ಸೇರಿದಂತೆ ಇಂಡಸ್ಟ್ರೀಗಳು ಅನುಭವಿಸುತ್ತಿರುವ ಹಲವಾರು ಸಮಸ್ಯಗಳ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾ ಕಾಟನ್ ಜಿನ್ನಿಂಗ್ ಫ್ಯಾಕ್ಟರಿ ಅಸೋಸಿಯೇಷನ್ ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಕೃಷಿ ಮಾರುಕಟ್ಟೆ ಹೊಸ ಕಾಯ್ದೆ ಜಾರಿಯಿಂದ ಹಲವು ಸಮಸ್ಯೆಗಳಾಗುತ್ತಿದ್ದು, ಪ್ರತಿ ದಿನ ಕಾಟನ್ ಮಿಲ್‍ಗಳ ವ್ಯಾಪಾರದ ವಿವರದ ಜತೆಗೆ ಮಾರುಕಟ್ಟೆ ಶುಲ್ಕವನ್ನು ನಿತ್ಯ ಕಟ್ಟಬೇಕಾಗಿದೆ. ಇದರಿಂದ ನಮ್ಮ ವ್ಯವಹಾರಕ್ಕೆ ಹೊಡೆತ ಬೀಳುತ್ತಿದೆ. ವ್ಯಾಪಾರದಲ್ಲಿ ತೊಡಗಿಸಿಕೊಂಡ ನಮಗೆ ದಿನ ನಿತ್ಯ ಸುಮಾರು 20-25 ಕೀ.ಮೀ ದೂರದಿಂದ ಕೃಷಿ ಮಾರುಕಟ್ಟೆಗೆ ತೆರಳಿ ನಿತ್ಯ ಶುಲ್ಕ ಕಟ್ಟಿ ಬರಲು ತೊಂದರೆಯಾಗುತ್ತಿದೆ.
ಪ್ರತಿ ವಾರ ಮಾರುಕಟ್ಟೆಯ ನಿಗದಿ ಪಡಿಸಿದ ಅಕೌಂಟ್‍ಗೆ ಆನ್ ಲೈನ್ ಮೂಲಕ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ ಕಾಟನ್ ಮಿಲ್ ಮಾಲೀಕರು, ಅಲ್ಲದೆ ವ್ಯಾಪಾರ ವಹಿವಾಟಿನ ಗಣಿಕೃತ ಪಟ್ಟಿಯ ಪ್ರತಿ ಪಡೆಯದೇ ಮಾರುಕಟ್ಟೆಯಲ್ಲಿಯೇ ಮುದ್ರಿಸಿದ ಖರೀದಿ ಪಟ್ಟಿಗಳಲ್ಲಿಯೇ ಕೈಯ್ಯಾರೇ ಸಿದ್ಧಪಡಿಸಿದ ಕಾರ್ಬನ್ ಮೂಲಕ ರೂಪಗೊಂಡ ದ್ವಿಪ್ರತಿಯನ್ನು ಸಮಿಗೆ ಸಲ್ಲಿಸುವಂತೆ ಮೌಖಿಕ ಆದೇಶ ಮಾಡಿರುತ್ತಾರೆ. ಸದರಿ ಖರೀದಿ ಪಟ್ಟಿಗಳಲ್ಲಿಯೇ ತಯಾರಿಸಿದ ಗಣಕೀಕೃತ ಪ್ರತಿಯನ್ನು ಸಹ ಒಪ್ಪುತ್ತಿಲ್ಲ.
ಈ ಆದೇಶವು ಕೃಷಿ ವಿಧೇಯಕ ಪರಿಶೀಲನಾ ಸಮಿತಿಯು ಕೃಷಿ ಮಾರಾಟ ಪದ್ಧತಿಯನ್ನು ಬಲ ಪಡಿಸುವದಕ್ಕಾಗಿ ಸಲ್ಲಿಸಿರುವ 27 ಶಿಫಾರಸ್ಸುಗಳ ಆಶಯಕ್ಕೂ ವಿರುಧ್ಧವಾಗಿದೆ ಎಂದು ತಿಳಿಸಿದ ಅವರು, ರೈತ ಮತ್ತು ವರ್ತಕ ಸ್ನೇಹಿಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಕಾರ್ಯನಿರ್ವಹಿಸಬೇಕಿದೆ. ಈ ಕುರಿತು ತಾವೂಗಳು ಸಂಬಂಧಿಸಿದ ಹೆಚ್ಚುವರಿ ನಿದೇರ್ಶಕರ ಜತೆ ಮಾತನಾಡಿ ಪರಿಹರಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಸುಮರ್ಲಾಲ್ ಜೈನ್, ಕಾರ್ಯದರ್ಶಿ ಗುರು ಮಣಿಕಂಠ ಸೇರಿದಂತೆ ಆನಂದ್ ರಾಟಿ, ಗೌರಿ ಶಂಕರ್, ಶರಣು ಗಾರಗಿ, ಸಿದ್ಧರಾಮ ಗೌಡ, ವೆಂಕಟರೆಡ್ಡಿ, ವೆಂಕಟೇಶ್ ಗೋಗಿ, ವಿಕ್ರಂ ಸಜ್ಜನ್, ಸಂದೀಪ, ಶರ್ಮಜಿ, ಸೌದಾಗರ್ ಹಾಗೂ ಕಾಟನ್ ಮಿಲ್ ನ ಮಾಲೀಕರು ಇದ್ದರು.