ಪ್ರಮುಖ ಸುದ್ದಿ
ಟ್ಯಾಂಕರ್ & ಬೈಕ್ ನಡುವೆ ಡಿಕ್ಕಿ ಬೈಕಿನಲ್ಲಿದ್ದ ದಂಪತಿ ಸಾವು, ಇಬ್ಬರು ಮಕ್ಕಳು ಬದುಕುಳಿದದ್ದೇ ಮಿರಾಕಲ್!
ಕಲಬುರಗಿ: ನಗರದ ನೂತನ ಸಾರಿಗೆ ಇಲಾಖೆ ಕಚೇರಿ ಬಳಿ ಟ್ಯಾಂಕರ್ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಭೀಕರ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅದೃಷ್ಟವಶಾತ್ ಬೈಕಿನಲ್ಲಿದ್ದ ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ಮೃತರನ್ನು ರೆಹಮತ್ ಬಡಾವಣೆಯ ಗೌಸ್ (30) ಹಾಗೂ ಪತ್ನಿ ನಫೀಸಾ (25) ಎಂದು ಗುರುತಿಸಲಾಗಿದೆ. ಗಾಯಾಳು ಮಕ್ಕಳನ್ನು ಸ್ಥಳೀಯರು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆನ್ನಲಾಗಿದೆ.
ಆದರೆ, ಮಾನವೀಯತೆ ಮರೆತ ಚಾಲಕ ಅಪಘಾತದ ಬಳಿಕ ಟ್ಯಾಂಕರ್ ಸಮೇತ ಎಸ್ಕೇಪ್ ಆಗಿದ್ದಾನೆ. ಸದ್ಯ ಜನನಿಬಿಡ ಪ್ರದೇಶವಾದ್ದರಿಂದ ಸ್ಥಳೀಯರು ತಕ್ಷಣಕ್ಕೆ ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಟ್ ಅಂಡ್ ರನ್ ಮಾಡಿರುವ ಚಾಲಕನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆಂದು ತಿಳಿದು ಬಂದಿದೆ.