ಯಾದಗಿರಿಃ ಜು.26ರಂದು ಕೋವಿಡ್ ಪರೀಕ್ಷೆ; ಸ್ಥಳದಲ್ಲಿಯೆ ವರದಿ
ಜು.26ರಂದು ಕೋವಿಡ್ ಪರೀಕ್ಷೆ; ಸ್ಥಳದಲ್ಲಿಯೆ ವರದಿ
ಯಾದಗಿರಿಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತೆ ಜುಲೈ 26ರಂದು ರವಿವಾರ ಯಾದಗಿರಿ, ಶಹಾಪೂರ, ಸುರಪುರ ಹಾಗೂ ಗುರುಮಠಕಲ್‍ನಲ್ಲಿ ಆ್ಯಂಟಿಜೆನ್ ಟೆಸ್ಟ್ (ಕೋವಿಡ್-19 ಟೆಸ್ಟ್) ಗಳನ್ನು ಮಾಡಲಾಗುತ್ತಿದ್ದು, ಸ್ಥಳದಲ್ಲಿಯೆ ವರದಿಗಳನ್ನು ನೀಡಲಾಗುವುದು ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿಗಳಾದ ಶಂಕರಗೌಡ ಎಸ್.ಸೋಮನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ನಗರದ ಕೋಲಿವಾಡ, ಲಕ್ಷ್ಮೀನಗರ, ಅಜೀಜ್ ಕಾಲೊನಿ, ಶಹಾಪೂರದ ಗುತ್ತಿಪೇಟ, ಇಂದಿರಾ ನಗರ, ಸೈಯದ್ ಓಣಿ, ಸುರಪುರದ ದೇವಲಗುಡ್ಡ, ರಂಗಂಪೇಟ, ಕಬಡಗೇರಾ ಹಾಗೂ ಗುರುಮಠಕಲ್‍ನ ಹರಿಜನವಾಡಗಳಲ್ಲಿರುವ ಬಾಣಂತಿಯರಿಗೆ, ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ, 65 ವಯಸ್ಸು ಮೇಲ್ಪಟ್ಟವರಿಗೆ, ಗರ್ಭಿಣಿಯರಿಗೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ತೊಂದರೆ, ಅಸ್ತಮಾ, ಹೃದಯ ತೊಂದರೆ ಹಾಗೂ ಇನ್ನಿತರ ಮಾರಣಾಂತಿಕ ಕಾಯಿಲೆಗಳು ಇದ್ದವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕೊರೊನಾ ಪರೀಕ್ಷೆ ಮಾಡುವರು ಹಾಗೂ ಸ್ಥಳದಲ್ಲಿಯೆ ವರದಿ ನೀಡುತ್ತಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ.