ಪ್ರಮುಖ ಸುದ್ದಿ
ಶಹಾಪುರ ಠಾಣೆಗೆ ನೂತನ ಸಿಪಿಐಃ ಹಿರೇಮಠ ಅಧಿಕಾರ ಸ್ವೀಕಾರ
ಶಹಾಪುರ ಠಾಣೆಗೆ ನೂತನ ಸಿಪಿಐ ಹಿರೇಮಠಃ ಅಧಿಕಾರ ಸ್ವೀಕಾರ
ಶಹಾಪುರಃ ಇಲ್ಲಿನ ನಗರ ಠಾಣೆಯ ಸಿಪಿಐ ಆಗಿ ಕಳೆದ ಒಂದುವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಹನುಮರಡ್ಡೆಪ್ಪ ಅವರು ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ನೂತನ ಸಿಪಿಐಯಾಗಿ ಚನ್ನಯ್ಯ ಹಿರೇಮಠ ಇಂದು (ಬುಧವಾರ) ಅಧಿಕಾರ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಪಿಎಸ್ಐ ಚಂದ್ರಕಾಂತ ಮೆಕಾಲೆ, ಪೊಲೀಸ್ ಸಿಬ್ಬಂದಿ ಇದ್ದರು. ಸಿಪಿಐ ಹನುಮರಡ್ಡೆಪ್ಪನವರನ್ನು ಬೇರಡೆ ವರ್ಗಾವಣೆ ಮಾಡಿದ್ದು, ಇನ್ನೂ ರಿಲೀವ್ ಆಗಿರುವದಿಲ್ಲ ಎಂದು ಮೂಲಗಳು ತಿಳಿಸಿವೆ.