ಕ್ಯಾಂಪಸ್ ಕಲರವಪ್ರಮುಖ ಸುದ್ದಿ
ಕ್ರಿಕೆಟ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ
ವಿದ್ಯಾರ್ಥಿ ಸಾಧನೆಗೆ ಶಾರದಾ ಶಾಲೆ ಹರ್ಷ
ಶಹಾಪುರಃ ಇತ್ತೀಚೆಗೆ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಚಿಣ್ಣರ ಕ್ರಿಕೆಟ್ ಸ್ಪರ್ಧೆಯಲ್ಲಿ ನಗರದ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೬ ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಅನಿಕೇತನರಡ್ಡಿ ತಂದೆ ವಿಕ್ರಂರಡ್ಡಿ ಉತ್ತಮ ಸ್ಪರ್ಧೆ ನೀಡಿದ್ದು, ಚಿಣ್ಣರ ಕ್ರಿಕೇಟ್ ವಿಭಾಗದಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಶಾಲಾ ವಿದ್ಯಾರ್ಥಿಯ ಅನಿಕೇತನರಡ್ಡಿ ಸಾಧನೆಗೆ ಶಾಲಾ ಪ್ರಾಂಶುಪಾಲ ಮಲ್ಲಿಕಾರ್ಜುನ ಆವಂಟಿ, ಮುಖ್ಯಗುರುಗಳಾದ ಸಿದ್ದು ಪಾಟೀಲ್ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ಸ್ಪರ್ಧೆಯಲ್ಲೂ ಜಯ ಸಾಧಿಸಿ ಶಾಲೆಯ ಕೀರ್ತಿ ಹೆಚ್ಚಿಸಲು ಎಂದು ಅವರು ಹಾರೈಸಿದ್ದಾರೆ.