ಪ್ರಮುಖ ಸುದ್ದಿ
BIG BREAKING : ಕರುನಾಡಲ್ಲೇ ನಡೆದಿದೆ ಈ ಪೈಶಾಚಿಕ ಕೃತ್ಯ…!
ಮಂಗಳೂರು : ದಕ್ಷಿಣ ಕನ್ನಡದ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಗುಡಿಬಾಗಿಲು ಆಶ್ರಮ ಬಳಿ ಆಟೋದಲ್ಲಿ ಸಂಚರಿಸುತ್ತಿದ್ದ ಸಹೋದರಿಯರ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ಆಟೋಕ್ಕೆ ಜೀಪಿನಿಂದ ಡಿಕ್ಕಿ ಹೊಡೆದು ನಿಲ್ಲಿಸಿದ ಕಾಮುಕ ಇಬ್ಬರು ಯುವತಿಯರನ್ನು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ, ಕಚ್ಚಿ ಗಾಯಗೊಳಿಸಿದ್ದಾನೆ. ರಕ್ಷಣೆಗೆ ಬಂದ ಆಟೋ ಚಾಲಕನಿಗೂ ಥಳಿಸಿದ್ದಾನೆ. ಬಳಿಕ ಆಟೋ ಚಾಲಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಫೋನ್ ಮಾಡುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ.
ಈ ಹಿಂದೆಯೂ ಆರೋಪಿ ಥಾಮಸ್ ಇದೇ ಯುವತಿಯರನ್ನು ಪೀಡಿಸುತ್ತಿದ್ದನಂತೆ. ಈ ಬಗ್ಗೆ ಹಿಂದೆಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೂ ತನ್ನ ಚಾಳಿಯನ್ನು ಮುಂದುವರೆಸಿದ ಕಾಮುಕ ಆರೋಪಿ ಇಂದು ತನ್ನ ವಿಕೃತಿಯನ್ನು ಮೆರೆದಿದ್ದಾನೆ. ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.