ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ಹಲ್ಲೆ
ಮಾರಕಾಸ್ತ್ರದಿಂದ ಯುವಕನ ಮೇಲೆ ಹಲ್ಲೆ ಪ್ರಕರಣ ದಾಖಲು
yadgiri, ಶಹಾಪುರಃ ಕ್ಷುಲ್ಲಕ ಕಾರಣಕ್ಕೆ ಗುರುವಾರ ಬೆಳ್ಳಂಬೆಳಗ್ಗೆ ದೇವಾಲಯಕ್ಕೆ ಹೋಗಿ ವಾಪಾಸ್ ಆಗುತ್ತಿದ್ದ ಯುವಕ ರಾಜು ತಂದೆ ಭೀಮರಾಯ ಸಾ.ಗುತ್ತಿಪೇಠ ಈತನ ಮೇಲೆ ಮಾರ್ಗ ಮಧ್ಯ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಅದೃಷ್ಟವಶಾತ್ ಯುವಕ ರಕ್ತಸಿಕ್ತ ಗಾಯಗಳಿಂದಲೇ ಠಾಣೆಗೆ ಓಡಿ ಬಂದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಯುವಕ ರಾಜು ಗುತ್ತಿಪೇಠ ಮೇಲೆ ಆರೋಪಿ ಆರೀಫ್ ಮತ್ತು ಮೂರು ಜನ ಸಹಚರರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ರಾಜೂ ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಾತಿಗೆ ವಿಳಂಬ ಧರಣಿ
ಯುವಕನ ಮೇಲೆ ಮಾರಕಾಸ್ತ್ರದಿಂದ ಬೆಳ್ಳಂಬೆಳಗ್ಗೆ ಹಲ್ಲೆ ನಡೆದಿದ್ದು, ಯುವಕ ರಕ್ತಸಿಕ್ತ ಗಾಯಗೊಂಡು, ಜೀವ ಉಳಿಸಿಕೊಂಡು ಠಾಣೆಗೆ ಆಗಮಿಸಿದ್ದಾನೆ. ಮಾರಣಾಂತಿಕ ಹಲ್ಲೆ ನಡೆದಿದ್ದರೂ ಪ್ರಕರಣ ದಾಖಲಿಸುವಲ್ಲಿ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿರುವದನ್ನು ಖಂಡಿಸಿ ಯುವಕನ ಪರ ಕರವೇ ಅಧ್ಯಕ್ಷ ಭೀಮು ಶಖಾಪುರ ನೇತೃತ್ವದಲ್ಲಿ ಠಾಣೆ ಆವರಣದಲ್ಲಿ ಧರಣಿ ನಡೆಸಲಾಯಿತು.
ಆಗ ಕೂಡಲೇ ಎಚ್ಚೆತ್ತುಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಧರಣಿ ನಿರತರು ಪತ್ರಿಕೆಗೆ ತಿಳಿಸಿದರು. ಯುವಕ ರಾಜೂ ಪರ ಸ್ನೇಹಿತರು, ಸಮಾಜದವರು ಧರಣಿ ನಡೆಸುವ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿದರು. ಕೂಡಲೇ ಆರೋಪಿತರ ಬಂಧನಕ್ಕೆ ಒತ್ತಾಯಿಸಿದರು.————————