ವೇಶ್ಯವಾಟಿಕೆ ನಡೆಸುತ್ತಿದ್ದ ವ್ಯಕ್ತಿ, ಮಟಕಾ ಬುಕ್ಕಿಗಳ ಬಂಧನ ಪ್ರತ್ಯೇಕ ಪ್ರಕರಣ ದಾಖಲು
ವೇಶ್ಯವಾಟಿಕೆ ನಡೆಸುತ್ತಿದ್ದ ವ್ಯಕ್ತಿ ಬಂಧನ
ಯಾದಗಿರಿ, ಶಹಾಪುರಃ ನಗರದ ಹಳೆ ಬಸ್ ನಿಲ್ದಾದ ಹತ್ತಿರದ ಲಾಡ್ಜ್ ವೊಂದರಲ್ಲ್ಲಿ ಬುಧವಾರ ಬೆಳಿಗ್ಗೆ ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕಕ್ಕಸಗೇರಾ ಗ್ರಾಮದ ರಂಗಣ್ಣ ದೇಸಾಯಿ ಬಂಧಿತ ಆರೋಪಿಯಾಗಿದ್ದಾನೆ.
ನಗರದ ಗೋದಾವರಿ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದಾಗ ಮಹಿಳೆ ಹಾಗೂ ಆರೋಪಿ ಕೋಣೆಯಲ್ಲಿ ಇದ್ದರು. ಆರೋಪಿಯಿಂದ ರೂ. 2500 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಲಾಡ್ಜ್ ಮ್ಯಾನೇಜರ ಆಗಾಗಾ ಮಹಿಳೆಯರನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾನೆ ಎಂಬ ದೂರು ಹಿನ್ನೆಲೆಯಲ್ಲಿ ಲಾಡ್ಜ್ ಮೇಲೆ ದಾಳಿ ನಡೆಸಿದ್ದರು ಎನ್ನಲಾಗಿದೆ. ವಿಷಯ ತಿಳಿದ ಲಾಡ್ಜ್ ಮ್ಯಾನೇಜರ ಗುರುರಾಜ ಪರಾರಿಯಾಗಿದ್ದಾನೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಹನುಮಂತಪ್ಪರಡ್ಡಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದು 2ನೇ ಪ್ರಕರಣ: ಕಳೆದ ವರ್ಷದ ಹಿಂದೆ ನಗರದ ಮೋಟಗಿ ರೆಸಿಡೆನ್ಸ್ ಲಾಡ್ಜ್ ಹತ್ತಿರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದು ನಗರದಲ್ಲಿ ಎರಡನೇಯ ಪ್ರಕರಣವಾಗಿದ್ದು, ನಗರದಲ್ಲಿ ನಿರಂತರವಾಗಿ ವೇಶ್ಯಾವಾಟಿಕೆ ದಂಧೆ ಅವ್ಯಾಹಿತವಾಗಿ ನಡೆಯುತ್ತಿದೆ. ಮುಗ್ದ ಮಹಿಳೆಯರನ್ನು ಇಂತಹ ಕೃತ್ಯದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸರು ಹೆಚ್ಚು ನಿಗಾವಹಿಸಿ ಇದನ್ನು ಮಟ್ಟ ಹಾಕಬೇಕು ಎಂದು ನಗರದ ಜನತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.
————
ಮಟ್ಕಾ ಬುಕ್ಕಿಗಳ ಬಂಧನ
ಶಹಾಪುರ: ನಗರದ ಮೂರು ಕಡೆ ಶಹಾಪುರ ಠಾಣೆಯ ಪೊಲೀಸರು ದಾಳಿ ಮಾಡಿ ಮಟ್ಕಾ ಬುಕ್ಕಿಗಳನ್ನು ಬಂಧಿಸಿದ್ದಾರೆ. ನಗರದ ಮಲ್ಲಪ್ಪ ಸಗರ ಎಂಬ ಮಟ್ಕಾ ಬುಕ್ಕಿಯನ್ನು ಬಂಧಿಸಿ ರೂ.2500 ವಶಪಡಿಸಿಕೊಂಡಿದ್ದಾರೆ.
ಅದರಂತೆ ಬಸವೇಶ್ವರನಗರದ ಉಮೇಶ ಪರಮೇಶ್ವರ ಎನ್ನುವ ಆರೋಪಿಯನ್ನು ಬಂಧಿಸಿದ್ದು ರೂ.1020, ಹಾಗೂ ಸಯ್ಯದ ಮಶಾಕ್ ಎನ್ನುವ ಆರೋಪಿಯನ್ನು ಬಂಧಿಸಿ ಆತನ ಹತ್ತಿರ ರೂ.4020 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರತೇಕವಾಗಿ ದೂರು ದಾಖಲಾಗಿವೆ.
————-