ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ
yadgiri, ಶಹಾಪುರ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ಕ್ರಾಸ್ ಬಳಿ ಜುಲೈ 2020 ರಂದು ನಡೆದಿದೆ.
ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಸುನೀಲ್ ರಂಗಪ್ಪ ಮಲ್ಹಾರ(22) ಅತ್ಯಾಚಾರ ಎಸಗಿದ ಆರೋಪಿ. ಅಲ್ಲದೆ ಶಹಾಪುರದ ದೇವಿ ನಗರದ ಶರಣಬಸವ ಮತ್ತು ಮುಡಬೂಳ ಗ್ರಾಮದ ದೌಲಪ್ಪ ಎನ್ನುವರು ಕುಮ್ಮಕ್ಕು ನೀಡಿದ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ಸರ್ಕಾರಿ ಬಾಲಕಿಯರ ಬಾಲ ಮಂದಿರದಿಂದ ಶುಕ್ರವಾರ ದೂರವಾಣಿ ಕರೆ ಮಾಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವಾಗಿದೆ ಮುಂದಿನ ಕ್ರಮ ಜರುಗಿಸಿ ಅಂತ ಬಂದ ಮಾಹಿತಿ ಮೇಲೆ ಶಹಾಪುರ ಠಾಣೆಯ ಪೊಲೀಸ ಇನ್ಸಪೆಕ್ಟರ್ ಚೆನ್ನಯ್ಯ ಹಿರೇಮಠ ಭೇಟಿ ನೀಡಿ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡರು.
ಅದರಂತೆ ಅಪ್ರಾಪ್ತ ಬಾಲಕಿಯನ್ನು ಅಟೋದಲ್ಲಿ ಅಪಹರಿಸಿಕೊಂಡು ತಾಲ್ಲೂಕಿನ ಮುಡಬೂಳ ಗ್ರಾಮದ ಕ್ರಾಸ್ ಹತ್ತಿರ ಗಿಡದ ಮರೆಯಲ್ಲಿ ಆರೋಪಿ ಸುನೀಲ್ ಅತ್ಯಾಚಾರ ಎಸಗಿದರೆ ಉಳಿದ ಇಬ್ಬರು ಆರೋಪಿಗಳು ಅಪಹರಣಕ್ಕೆ ಕುಮ್ಮಕ್ಕು ನೀಡಿದ್ದರು ಎಂಬ ಆರೋಪದ ಮೇಲೆ ದಸ್ತಗಿರಿ ಮಾಡಿ ಘಟನಾ ಸ್ಥಳಕ್ಕೆ ಶನಿವಾರ ಕರೆದುಕೊಂಡು ಮಹಜರು ಮಾಡಲಾಗಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ.
ಘಟನೆ ನಡೆದು ಒಂದು ವರ್ಷದ ಬಳಿಕ ಅಪ್ರಾಪ್ತ ಬಾಲಕಿ ಹೇಳಿಕೆ ನೀಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
—————–