ಮಾ.3 ರಂದು ಮಹಿಳೆ ನಾಪತ್ತೆ ಪ್ರಕರಣ ದಾಖಲು
ಯಾದಗಿರಿಃ ಕಳೆದ ಮಾರ್ಚ್ 3 ರಂದು ಔಷಧಿ (ಮಾತ್ರೆ) ತರಲೆಂದು ಮನೆಯಿಂದ ಹೊರ ಹೋಗಿದ್ದ ಮಹಿಳೆಯೊಬ್ಬಳು ಕಾಣೆಯಾಗಿರುವ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾಂತಿನಗರದ ನಿವಾಸಿಯಾದ ಗಂಗಮ್ಮ ತಂದೆ ಕಲ್ಲಪ್ಪ ಎಂಬ 26 ವರ್ಷದ ಮಹಿಳೆ ಕಾಣೆಯಾಗಿದ್ದು, ಈ ಸಂಬಂಧ ಆಕೆಯ ಸಹೋದರ ಬಸವರಾಜ ತಂದೆ ಕಲ್ಲಪ್ಪ ಎಂಬುವರು ಮಾರ್ಚ್ 8 ರಂದು ದೂರು ದಾಖಲಿಸಿದ್ದಾರೆ ಎಂದು ಠಾಣೆಯ ಸಬ್ ಇನ್ಸ್‍ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗೆಲಸ ಮಾಡುತ್ತಿದ್ದ ಗಂಗಮ್ಮ ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದು, ಸಹೋದರನ ಮಗಳು ಕಾವ್ಯಾಳಿಗೆ ಮಾತ್ರೆ ತರುವುದಾಗಿ ಹೇಳಿ ಹೊರ ಹೋದವರು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಸಹೋದರ ಹಾಗೂ ಸಂಬಂಧಿಕರು ಯಾದಗಿರಿ ನಗರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಅಲ್ಲದೆ ಐದು ದಿನ ಕಳೆದರೂ ವಾಪಸ್ ಮನೆಗೆ ಬಂದಿರುವದಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಸಹೋದರ ದೂರು ನೀಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಮಹಿಳೆ ಚಹರೆಃ ಸಾಧಾ ಕಪ್ಪು ಮೈಬಣ್ಣ ದುಂಡನೆಯ ಮುಖವಿದ್ದು, 4 ಅಡಿ 3 ಇಂಚು ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು, ಹಳದಿ ಬಣ್ಣದ ಚೂಡಿ ಮತ್ತು ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಭಾμÉ ಮಾತನಾಡುತ್ತಾಳೆ. ಕಾಣೆಯಾದ ತನ್ನ ತಂಗಿ ಗಂಗಮ್ಮಳನ್ನು ಪತ್ತೆ ಮಾಡಿಕೊಡಬೇಕೆಂದು ಆಕೆಯ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.