ಕುತ್ತಿಗೆಗೆ ಸೀರೆ ಬಿಗಿದು ಉಸಿರುಗಟ್ಟಿಸಿ ಯುವಕನ ಕೊಲೆ
yadgiri, ಶಹಾಪುರಃ ಜೇವರ್ಗಿ ತಾಲೂಕಾ ವ್ಯಾಪ್ತಿಯಲ್ಲಿ ಬರುವ ದಂಡಸೊಲ್ಲಾಪುರ ಗ್ರಾಮದ ಯುವಕನೊರ್ವನಿಗೆ ತಾಲೂಕಿನ ಚಾಮನಾಳ ಗ್ರಾಮದ ಸಾಹು ಶಾಲೆ ಸಮೀಪದಲ್ಲಿ ಕುತ್ತಿಗೆಗೆ ಸೀರೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ನಡೆದಿದೆ.
ಸಚಿನ್ ಮುರುಕುಂದಾ (28) ಸಾ. ದಂಡಸೊಲ್ಲಾಪುರ ಆಗಿದ್ದು ಈತ ದಂಡಸೊಲ್ಲಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಪಂಚರ್ ಅಂಗಡಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದನು ಎನ್ನಲಾಗಿದೆ.
ಇನ್ನೂ ಅವಿವಾಹಿತನಾಗಿರುವ ಸಚಿನ್ ಇಬ್ಬರು ತಂಗಿಯರನ್ನು ಮತ್ತು ಓರ್ವ ತಮ್ಮನನ್ನು ಹೊಂದಿದ್ದಾನೆ. ಎಂದಿನಂತೆ ನಿನ್ನೆ ಸೋಮವಾರ 11 ಗಂಟೆಯ ಸುಮಾರಿಗೆ ಅಂಗಡಿಗೆ ಬಂದ ಸಚಿನ್ 2 ಗಂಟೆಯಾದರೂ ಅಂಗಡಿಯಿಂದ ಕಾಣೆಯಾಗಿದ್ದನು ಎನ್ನಲಾಗಿದೆ.
ನಂತರದಲ್ಲಿ ಚಾಮನಾಳ ಸೀಮಾಂತರದ ಪಾದ್ರಿಯವರ ಜಮೀನಿನಲ್ಲಿ ಶವ ಪತ್ತೆಯಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲಿಸಿ ಕುತ್ತಿಗೆಗೆ ಸೀರೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಎಸ್.ಪಿ. ಡಾ.ಸಿ.ಬಿ.ವೇದಮೂರ್ತಿ, ಸಿಪಿಐ ಚನ್ನಯ್ಯ ಹಿರೇಮಠ, ಗೋಗಿ ಠಾಣಾ ಪಿಎಸ್‍ಐ ಅಯ್ಯಪ್ಪ, ಭೀ.ಗುಡಿ ಪಿಎಸ್‍ಐ ಸಂತೋಷ ರಾಠೋಡ್ ಭೇಟಿ ನೀಡಿ ವಿಚಾರಣೆ ಕಾರ್ಯ ಕೈಗೊಂಡಿದ್ದಾರೆ ಅರೋಪಿಗಳ ಪತ್ತೆಗಾಗಿ ವ್ಯಾಪಕ ಚಾಲ ಬೀಸಿದ್ದು ತನಿಖೆ ಮುಂದುವರೆದಿದೆ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.