ಪ್ರಮುಖ ಸುದ್ದಿ

ಉಪನ್ಯಾಸಕನ ಕೊಲೆ ಪ್ರಕರಣಃ 3 ಆರೋಪಿಗಳ ಬಂಧನ

ಕೊಳ್ಳೂರ(ಎಂ) ಸಮೀಪ ನಡೆದ ಘಟನೆ, ಆರೋಪಿಗಳ ಬಂಧನ

ಉಪನ್ಯಾಸಕನ ಕೊಲೆ ಪ್ರಕರಣಃ 3 ಆರೋಪಿಗಳ ಬಂಧನ

ಕೊಳ್ಳೂರ(ಎಂ) ಸಮೀಪ ನಡೆದ ಘಟನೆ, ಆರೋಪಿಗಳ ಬಂಧನ

yadgiri, ಶಹಾಪುರಃ ಮೇ.12 ರಂದು ಕೊಳ್ಳೂರ(ಎಂ) ಸೀಮಾಂತರದಲ್ಲಿ ದೇವದುಗಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಾನಪ್ಪ ಗೋಪಾಳಪುರ ಎಂಬುವವರನ್ನು ಬೈಕ್ ತಡೆದು ದುಷ್ಕರ್ಮಿಗಳು ಕೊಲೆ ಮಾಡಲಾಗಿತ್ತು. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರ ತಂಡ ತೀವ್ರ ತನಿಖೆ ನಡೆಸುವ ಮೂಲಕ ಮಂಗಳವಾರ ಮೂವರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘಟನೆ ವಿವರಃ ಮೇ.12 ರಂದು ಉಪನ್ಯಾಸಕ ಮಾನಪ್ಪ ಅವರು ಎರಡನೇ ಪತ್ನಿ ತವರೂರಾದ ಹಯ್ಯಾಳ(ಬಿ) ಗ್ರಾಮಕ್ಕೆ ತೆರಳುತ್ತಿರುವಾಗ ಮೊದಲನೇಯ ಪತ್ನಿ ಮಗ ಬಸಲಿಂಗ ಮತ್ತು ಇನ್ನಿಬ್ಬರು ಸ್ನೇಹಿತರು ಸೇರಿ ಕೊಲೆ ಮಾಡಲಾಗಿತ್ತು. ಆರೋಪಿಗಳ ವಿಚಾರಣೆಯಿಂದ ಇದೀಗ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಮೊದಲನೇಯ ಪತ್ನಿಗೆ ಮೂವರು ಮಕ್ಕಳಿದ್ದು, ಅವರನ್ನು ಉಪನ್ಯಾಸಕ ದೂರ ಇಟ್ಟಿದ್ದ ಎನ್ನಲಾಗಿದೆ. ಮೊದಲನೇಯ ಪತ್ನಿ ಮಗ ಆರೋಪಿ ಬಸಲಿಂಗ ಹೇಳಿಕೆ ಪ್ರಕಾರ, ತನ್ನ ತಾಯಿ ಹಾಗು ತಮ್ಮನ್ನು ತಂದೆ 25 ವರ್ಷದಿಂದ ನಿರ್ಲಕ್ಷವಹಿಸಿದ್ದು, ಯಾವುದೇ ಸಹಾಯ ಸಹಕಾರ ನೀಡಿರುವದಿಲ್ಲ.

ಮೊನ್ನೆ ಅಕ್ಕಳ ಮದುವೆಗೆ ಬಂಗಾರ ಕೊಡುವುದಾಗಿ ಹೇಳಿ ಕೊನೆಗಳಿಗೆಯಲ್ಲಿ ಅದು ಕೊಡಲಿಲ್ಲ. ಇದರಿಂದ ನಾವೆಲ್ಲ ಸಾಕಷ್ಟು ಮುಜುಗರ ಪಡುವಂತಾಯಿತು. ವಿದ್ಯಾಭ್ಯಾಸಕ್ಕಾಗಿ ಬದುಕಿಗಾಗಲಿ ಯಾವುದೆ ಸಹಾಯ ಮಾಡಿರಲಿಲ್ಲ ನಮ್ಮ ತಾಯಿ ನಮ್ಮನ್ನು ಈ ಮೊದಲಿಂದಲೂ ನಮ್ಮ ತಂದೆ ಮಾನಪ್ಪ ಸೇರುವದಿಲ್ಲ ಜೀವನಾಂಶವು ನಮ್ಮ ತಾಯಿಗೆ ನೀಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಮದು ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೀಗಾಗಿ ಮನೋಕ್ಲೇಷದಿಂದ ತನ್ನಿಬ್ಬರ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೊದಲನೇಯ ಪತ್ನಿ ಮಗ ಬಸಲಿಂಗಪ್ಪ @ ರಾಜೂ ತಂದೆ ಮಾನಪ್ಪ ಗೋಪಾಳಪುರ(27) ಮತ್ತು ಸ್ನೇಹಿತ ಸುರೇಶ (23) ಮಾದೇಶ (20) ಸೇರಿಕೊಂಡು ಉಪನ್ಯಾಸಕ ಮಾನಪ್ಪನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಮೇ.12 ರಂದು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯಶಸ್ವಿ ಕಾರ್ಯಾಚರಣೆಃ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದ ಎಸ್ಪಿ ಡಾ.ವೇದಮೂರ್ತಿ ಮಾರ್ಗದರ್ಶನದಲ್ಲಿ ಉಪ ವಿಭಾಗದ ಉಪಅಧೀಕ್ಷಕ ಜೇಮ್ಸ್ ಮಿನೇಜಸ್ ನೇತೃತ್ವದಲ್ಲಿ ಪಿಐ ಶ್ರೀನಿವಾಸ ಅಲ್ಲಾಪುರ ಮತ್ತು ಪಿಎಸ್‍ಐ ಶಾಮಸುಂದರ ಹಾಗೂ ಕಾನ್ಸಟೇಬಲ್ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button