ಪ್ರಮುಖ ಸುದ್ದಿ

ಚಾಮನಾಳ ಕೊಲೆ ಪ್ರಕರಣಃ ಆರೋಪಿಗಳಿಬ್ಬರ ಬಂಧನ

ಕ್ಷುಲ್ಲಕ ಕಾರಣಕ್ಕೆ ಕೊಲೆ ಆರೋಪಿಗಳ ಬಂಧನ-ಡಾ.ವೇದಮೂರ್ತಿ

ಚಾಮನಾಳ ಕೊಲೆ ಪ್ರಕರಣಃ ಆರೋಪಿಗಳಿಬ್ಬರ ಬಂಧನ

ಕ್ಷುಲ್ಲಕ ಕಾರಣಕ್ಕೆ ಕೊಲೆ ಆರೋಪಿಗಳ ಬಂಧನ-ಡಾ.ವೇದಮೂರ್ತಿ

yadgiri, ಶಹಾಪುರಃ ತಾಲೂಕಿನ ಚಾಮನಾಳ ಗ್ರಾಮದ ಹೊಲವೊಂದರಲ್ಲಿ ಮೊನ್ನೆ ಮೇ.30 ರಂದು ಯುವಕ ಸಚಿನ್ ಎಂಬಾತನನ್ನು ಸೀರೆಯೊಂದನ್ನು ಕುತ್ತಿಗೆಗೆ ಸುತ್ತಿ ಕೊಲೆ ಮಾಡಲಾಗಿತ್ತು. ಗೋಗಿ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರ ತಂಡ ಆರೋಪಿಗಳಿಬ್ಬರನ್ನು ಬುಧವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಲೆ ಆರೋಪಿಗಳಿಬ್ಬರು ಕೊಲೆಯಾದ ಸಚಿನ್ ಮುರುಕುಂದ ಈತನ ಸ್ನೇಹಿತರೇ ಆಗಿದ್ದು, ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಚಿನ್‍ನನ್ನ ಕಲ್ಲಿನಿಂದ ಹೊಡೆದು ಸೀರೆಯಿಂದ ಕುತ್ತಿಗೆಗೆ ಸುತ್ತಿ ಉಸಿರು ಗಟ್ಟಿಸಿ ಕೊಲೆಗೈಯಲಾಗಿದೆ ಎಂದು ಆರೋಪಿಗಳಿಬ್ಬರು ಪೊಲೀಸರ ಮುಂದೆ ತಪ್ಪೊಪ್ಪಿ ಕೊಂಡಿದ್ದಾರೆ.

ಆರೋಪಿ ಚಂದ್ರಕಾಂತ (ಚಂದ್ರು) ರಾಠೋಡ (28) ಸಾ.ಚಾಮನಾಳ ತಾಂಡ ಮತ್ತು ಹಳ್ಳೆಪ್ಪ ಮಾದರ (24) ಸಾ.ದಂಡಸೋಲಾಪುರ ಈ ಇಬ್ಬರು ಕೊಲೆಯಾದ ಸಚಿನ್ ಸ್ನೇಹಿತರಾಗಿದ್ದು, ಮೂವರು ಮಧ್ಯಪಾನ ಮಾಡುವ ಹವ್ಯಾಸ ಉಳ್ಳವರಾಗಿದ್ದಾರೆ. ಕ್ಷುಲ್ಲಕ ಕಾರಣವೊಂದಕ್ಕೆ ಮೂವರ ನಡುವೆ ಗಲಾಟೆ ನಡೆದಿದ್ದು, ಆರೋಪಿ ಚಂದ್ರು ಚಾಮನಾಳ ಗ್ರಾಮದ ಸೀತಾರಾಮ ರಾಠೋಡ ಎಂಬ ರೈತನ ಹೊಲದಲ್ಲಿ ಬೆಳೆಸಲಾಗಿದ್ದ ಬದನೆಕಾಯಿಗಳನ್ನು ಆರೋಪಿ ಚಂದ್ರು ಕಳುವು ಮಾಡಿಕೊಂಡು ಹೋಗಿದ್ದ ಎನ್ನಲಾಗಿದೆ.

ಈ ವಿಷಯ ತಿಳಿದಿದ್ದ ಸಚಿನ್ ಮಾಲೀಕ ಸೀತಾರಾಮ ಅವರಿಗೆ ಚಂದ್ರು ತಮ್ಮ ಹೊಲದಲ್ಲಿ ಬೆಳೆದ ಬದನೆಕಾಯಿ ಕಳುವು ಮಾಡಿಕೊಂಡು ಹೋಗಿರುವ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ಆಗ ಬದನೆಕಾಯಿ ಮಾಲೀಕ ಸೀತಾರಾಮ ಆರೋಪಿ ಚಂದ್ರುಗೆ ತರಾಟೆಗೆ ತೆಗೆದುಕೊಂಡಿದ್ದ ಎನ್ನಲಾಗಿದೆ. ಈ ವಿಷಯಕ್ಕೆ ಸ್ನೇಹಿತರ ಮಧ್ಯ ಗಲಾಟೆ ಶುರುವಾಗಿದ್ದು, ಚಂದ್ರು ಮತ್ತು ಹಳ್ಳೆಪ್ಪ ಇಬ್ಬರು ಸಚಿನ್ ಜೊತೆ ಕುಡಿದ ಅಮಲಿನಲ್ಲಿ ಜಗಳವಾಡಿದ್ದಾರೆ. ಆಗ ಸಚಿನ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಅಲ್ಲದೆ ಚಂದ್ರು ರಾಠೋಡನ ಹೆಂಡತಿ ಹೆಸರೆತ್ತಿ ಮಾತಾಡಿರುವದರಿಂದ ಕೋಪಗೊಂಡ ಈ ಇಬ್ಬರು ಕಲ್ಲಿನಿಂದ ಹೊಡೆದು ಸೀರೆಯಿಂದ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಕೊಲೆಗೈದಿರುವದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಎಸ್ಪಿ ಡಾ.ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಯಾದಗಿರಿ ಡಿವೈಎಸ್ಪಿ ಜೇಮ್ಸ್ ಮಿನೇಜೆಸ್ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಸಿಪಿಐ ಚನ್ನಯ್ಯ ಹಿರೇಮಠ, ಗೋಗಿ ಠಾಣೆಯ ಪಿಎಸ್‍ಐ ಅಯ್ಯಪ್ಪ, ಭೀ.ಗುಡಿ ಠಾಣೆಯ ಪಿಎಸ್‍ಐ ಸಂತೋಷ ರಾಠೋಡ ಸೇರಿದಂತೆ ಇತರೆ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button