ಪ್ರಮುಖ ಸುದ್ದಿ
ಶಹಾಪುರಃ ಅಕ್ರಮ ಮದ್ಯ ಮಾರಾಟ ಆರೋಪಿ ಬಂಧನ
ಅಕ್ರಮ ಮದ್ಯ ಮಾರಾಟ ಆರೋಪಿ ಬಂಧನ
yadgiri,ಶಹಾಪುರಃ ನಗರದ ಹಳಿಸಗರ ಭಾಗದಲ್ಲಿ ಕನ್ಯಾಕೋಳೂರ ರಸ್ತೆ ಮಾರ್ಗದಲ್ಲಿ ಹೊಟೇಲ್‍ವೊಂದರಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ನಗರ ಠಾಣೆ ಸಿಪಿಐ ಹನುಮರಡ್ಡೆಪ್ಪ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬುಧವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಆರೋಪಿಯು 28,644 ರೂ. ಮೌಲ್ಯದ ಮಧ್ಯದ ಬಾಟಲಿಗಳನ್ನು ಪೊಲೀಸರು ದಾಳಿ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಐ ಹನುಮರಡ್ಡೆಪ್ಪ ತಿಳಿಸಿದ್ದಾರೆ.
—-