ಪ್ರಮುಖ ಸುದ್ದಿ
ಶಹಾಪುರಃ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ
ಅಪರಿಚಿತ ಶವ ಪತ್ತೆ
ಶಹಾಪುರಃ ಭೀಮರಾಯನ ಗುಡಿಯಿಂದ ಗೋಗಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯಇರುವ ಬೋರುಕಾ ವಿದ್ಯುತ್ ಕಾರ್ಪೋರೇಷನ್ ಹತ್ತಿರದ ಕಾಲುವೆಯೊಂದರಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಗೋಗಿ ಗ್ರಾಮ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯೋರ್ವನ ಶವ ಇದಾಗಿದ್ದು, ಗುರುತು ಪತ್ತೆಯಾಗಿಲ್ಲ. ಈ ಕುರಿತು ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾರಾದರೂ ಕಾಣೆಯಾದಲ್ಲಿ, ಗೋಗಿ ಪೊಲಿಸ್ ಠಾಣೆ ನಂಬರ್ 08479-223355 ಗೆ ಕಾಲ್ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.