ಪ್ರಮುಖ ಸುದ್ದಿ
BREAKING NEWS- ಎಡನೀರು ಕೇಶವಾನಂದ ಭಾರತೀ ಶ್ರೀ ವಿಧಿವಶ.!
BREAKING NEWS- ಎಡನೀರು ಕೇಶವಾನಂದ ಭಾರತೀ ಶ್ರೀ ವಿಧಿವಶ.!
ಮಂಗಳೂರುಃ ಕೇರಳದ ಕಾಸರಗೋಡು ಜಿಲ್ಲೆಯ ಜಗದ್ಗುರು ಶಂಕರಾಚಾರ್ಯರ ಸಂಸ್ಥಾನದ ಎಡನೀರು ಮಠಾಧೀಶರಾಗಿದ್ದ ಕೇಶವಾನಂದ ಭಾರತೀ ಸ್ವಾಮೀಜಿ ಶನಿವಾರ ಮಧ್ಯರಾತ್ರಿ ಇಹಲೋಕ ತ್ಯೇಜಿಸಿದರು.
ಕಾಸರಗೋಡಿನ ಕನ್ನಡ ಸಂಸ್ಕೃತಿಯ ಕೇಂದ್ರವಾಗಿ ಗುರುತಿಸಲ್ಪಟ್ಟಿದ್ದು, ಸಂಗೀತ ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿಗೆ ಸ್ವಾಮೀಜಿ ಅವರು ಅಪಾರ ಕೊಡುಗೆ ನೀಡಿದ್ದರು.
1960, ನವೆಂಬರ್ 14 ರಿಂದ ಎಡನೀರು ಮಠಾಧೀಶರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ, ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಕನ್ನಡ ನಾಡು, ನುಡಿ, ಸಂಸ್ಕೃತ, ಶಿಕ್ಷಣ ಬೆಳೆಸುವಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಧಾರ್ಮಿಕ ವಾಗಿಯೂ ಕಾರ್ಯ ಸಾಧನೆ ಮಾಡಿದ್ದಾರೆ. ಗುರುತರ ಜವಬ್ದಾರಿವಹಿಸುವ ಮೂಲಕ ಸಮಾಜದ ಉನ್ನತಿಗೆ, ಒಳಿತಿಗೆ ಶ್ರಮಿಸಿದ್ದರು.