ಪ್ರಮುಖ ಸುದ್ದಿ
ಹುತಾತ್ಮ ವೀರ ಯೋಧನಿಗೊಂದು ಗೌರವ ನಮನ
ಹುತಾತ್ಮ ವೀರ ಯೋಧನಿಗೊಂದು ಸೆಲ್ಯೂಟ್
ಮಹಾರಾಷ್ಟ್ರದ ಗಡಚುರಳ್ಳಿ ಜಿಲ್ಲೆಯ ಗ್ಯಾರಾಪತಿ ಪ್ರದೇಶದಲ್ಲಿ ನಿನ್ನೆ ಸಿಆರ್ ಪಿಎಫ್ ನಿಂದ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆದಿತ್ತು. ಕಾರ್ಯಾಚರಣೆ ಸಂದರ್ಭದಲ್ಲಿ ಕರ್ನಾಟಕದ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಸಿಆರ್ ಪಿಎಫ್ ಯೋಧ ಮಂಜುನಾಥ್ ಜಕ್ಕಣ್ಣವರ್ ಗೆ ಗುಂಡೇಟು ಬಿದ್ದಿದ್ದು ತೀವ್ರ ಗಾಯ ಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಯೋಧ ಮಂಜುನಾಥ್(31) ನಿಧನರಾಗಿದ್ದಾರೆ.
112 ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮಂಜುನಾಥ ಸಾವು ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ದುಖ: ತಂದಿದೆ. ನಾಳೆ ಧಾರವಾಡದ ಸ್ವಗ್ರಾಮ ಮನಗುಂಡಿ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಬರಲಿದ್ದು ಸರ್ಕಾರಿ ಗೌರವದೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ ನಡೆಯಲಿದೆ.