ಓಟು ಜಿಹಾದಿ’ ಯಿಂದ ಭಾರತ ವಿನಾಶ – C T ರವಿ
ಮತೀಯಾಧರಿತ ಮೀಸಲಾತಿ ಸಂವಿಧಾನದ ವಿರೋಧವಾಗಿದೆ - ರವಿ ಖಡಕ್ ಮಾತು
‘ಓಟು ಜಿಹಾದಿ’ ಯಿಂದ ಭಾರತ ವಿನಾಶ – C T ರವಿ ಆರೋಪ
ಮತೀಯಾಧರಿತ ಮೀಸಲಾತಿ ಸಂವಿಧಾನದ ವಿರೋಧವಾಗಿದೆ – ರವಿ ಖಡಕ್ ಮಾತು
ವಿವಿ ಡೆಸ್ಕ್ಃ ಮತೀಯಾಧಾರಿತ ಮೀಸಲಾತಿ ನೀಡುವದು ಸಂವಿಧಾನ ವಿರೋಧವಾಗಿದೆ. ಜಾತಿ ಆಧಾರಿತ, ಶೈಕ್ಷಣಿಕ, ಆರ್ಥಿಕತೆಗನುಗುಣವಾಗಿ ಮೀಸಲಾತಿ ನೀಡಬಹುದು ಆದರೆ ಮತೀಯ ಆಧಾರಿತ ಅಂದ್ರೆ ಧರ್ಮ ಆಧಾರಿತ ಮೀಸಲಾತಿ ಸಲ್ಲದು ಇದು ನಾವು ವಿರೋಧಿಸುತ್ತೇವೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ಮತೀಯ ಆಧಾರಿತ ಮೀಸಲಾತಿ ಸಲ್ಲದು ಎಂದು ಅಂದಿನ ಸಾಂವಿಧಾನಿಕ ಸಭೆಯಲ್ಲಿಯೇ ತಿಳಿಸಿದ್ದಾರೆ. ಮತೀಯ ಆಧಾರಿತ ಮೀಸಲಾತಿ ಓಟು ಜಿಹಾದಿ ಆಗಲಿದೆ. ಓಟು ಜಿಹಾದಿಯಿಂದ ಭಾರತ ನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಬದ್ಧ ಮೀಸಲಾತಿಗೆ ನಮ್ಮ ಒಪ್ಪಿಗೆ ಇದೆ ಆದರೆ ಸಂವಿಧಾನ ಮೀರಿ ಧರ್ಮಾಧರಿತ ಮೀಸಲಾತಿ ನೀಡುವದು ಸರಿಯಲ್ಲ. ಆ ಕಾರಣ ಬಿಜೆಪಿ ಅಧಿಕಾರದಲ್ಲಿದ್ದಾಗ ಧರ್ಮಾಧರಿತ ಮೀಸಲಾತಿ ರದ್ದತಿ ಕಾರ್ಯ ಕೈಗೊಂಡಿತ್ತು ಎಂದು ಅವರು ಸ್ಮರಿಸಿದರು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಒಂದು ತಮ್ಮ ಹಿಂದಿನ ಸರ್ಕಾರಗಳಂತೆ ಧರ್ಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತೀಯ ಮೀಸಲಾತಿ ಸೌಲಭ್ಯ ಕಲ್ಪಿಸುತ್ತಾ ಬಂದಿದ್ದು, ಇದು ದೇಶ ಹಿಂದೇ ದೇಶ ವಿಭಜನೆಗೂ ಕಾರವಾಗಿದೆ. ಇದೇ ರೀತಿ ಮುಂದುವರೆದರೆ ಮತ್ತೆ ದೇಶ ವಿಭಜನೆಯ ಸ್ಥಿತಿ ತಲುಪಿದರೂ ಅಚ್ಚರಿ ಪಡುವ ಹಾಗಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅವರು ಆಪ್ತರು ಉಪಸ್ಥಿತರಿದ್ದರು.