ಕ್ರೈಸ್ತ್ ರ ಮಾರಣ ಹೋಮ ಮಾಡಿದ ಟಿಪ್ಪು ನಿಮಗೆ ಪ್ರೇರಣೆಯೇ -ಸಿಟಿ ರವಿ
ದಲಿತ ಮಹಿಳೆ ಓಬವ್ವನ ಕೊಂದ ವಂಶಸ್ಥನೆಂದು ಟಿಪ್ಪು ಜಯಂತಿ ಮಾಡುವಿರಾ.?
ಟ್ವಿಟ್ ಮೂಲಕ ತಿವಿದ ಸಿಟಿ, ನಿಲ್ಲದ ಟ್ವಿಟ್ ಪ್ರಶ್ನೆ, ಆರೋಪ
ವಿವಿ ಡೆಸ್ಕ್ಃ ಕ್ರೈಸ್ತ ಮತಕ್ಕೆ ಸೇರಿದ ಸಾವಿರಾರು ಮುಗ್ಧರ ಮಾರಣಹೋಮ ನಡೆಸಿ “ನೆತ್ತರ ಕೆರೆ” ಕಟ್ಟಿಸಿದವನದ್ದು ವಿಶಾಲ ಹೃದಯವೇ? ದುರ್ಗದ ಹುಲಿ ವೀರ ಮದಕರಿ ನಾಯಕರ ವಂಶವನ್ನು ನಿರ್ವಂಶಗೊಳಿಸಿದ ಮತ್ತು ದಲಿತ ಮಹಿಳೆ ಒನಕೆ ಓಬವ್ವರನ್ನು ಕೊಂದ ವಂಶಕ್ಕೆ ಸೇರಿದವನೆಂಬ ಕಾರಣಕ್ಕೆ ನೀವು ಟಿಪ್ಪು ಸುಲ್ತಾನನನ್ನು ವೈಭವೀಕರಿಸುತ್ತಿದ್ದೀರಾ ಸಿದ್ರಾಮಯ್ಯನವರೇ.? ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಟ್ವಿಟ್ ಮೂಲಕ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ರಾಮಯ್ಯನವರನ್ನು ತಿವಿದಿದ್ದಾರೆ.
ಮೈಸೂರು ಮತ್ತು ಮಲಬಾರು ಪ್ರಾಂತ್ಯಗಳಲ್ಲಿ ಲಕ್ಷಾಂತರ ಹಿಂದೂಗಳ ಮತಾಂತರ ಮಾಡಿದ್ದು. ಸ್ನೇಹ ಬೆಳೆಸುವ ಕಪಟ ನಾಟಕವಾಡಿ ಅಸಂಖ್ಯಾತ ಕೊಡವರನ್ನು ನಿರ್ದಯವಾಗಿ ಕೊಂದಿದ್ದು. ಕನ್ನಡದ ಬದಲಾಗಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಬಲವಂತವಾಗಿ ಹೇರಿದ ಟಿಪ್ಪುವಿನ ಗುಣಗಳೇ ನಿಮಗೆ ವಿಶಾಲತೆಯೇ ಆ ಕಾರಣಕ್ಕಾಗಿ ನೀವು ಟಿಪ್ಪು ಜಯಂತಿ ಆಚರಿಸಲು ಪ್ರೇರಣೆಯಾಗಿದ್ದಾರೆಯೇ.? ಎಂದು ಅವರು ಪ್ರಶ್ನಿಸದ್ದಾರೆ.