ಕೈ ಕೊಟ್ಟ ಕರೆಂಟ್ -ಬಾಳೆ ಬೆಳೆಗಾರನ ಬಾಳು ಹೈರಾಣ..!
ಅಸಮರ್ಪಕ ವಿದ್ಯುತ್ಗೆ ಬಾಳೆ ಬೆಳಗಾರ ಕಂಗಾಲು..!
ಬಾಳೆ ಬೆಳೆದು ಆರ್ಥಿಕ ಸಂಕಷ್ಟಕ್ಕೊಳಗಾದ ರೈತ..!
ಸಿ.ಡಿ.ಶಹಾಪುರ
ಯಾದಗಿರಿಃ ಸಾಲಸೂಲ ಮಾಡಿ, ಕಷ್ಟಪಟ್ಟು ಬೆಳೆದ ಬಾಳೆ ಬೆಳೆ ಇನ್ನೇನು ಫಸಲು ಕೈ ಸೇರಿತು ಎನ್ನುಷ್ಟರಲ್ಲಿಗೆ ಅಸಮರ್ಪಕ ವಿದ್ಯುತ್ ಕೊರತೆಯಿಂದ ನೀರು ಕಾಣದೆ ಬಾಳೆ ಬೆಳೆ ಸಂಪೂರ್ಣವಾಗಿ ಹಾನಿಯಾಗಿಡಾಗಿದ್ದು ರೈತನನ್ನ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ..!
ಶಹಾಪೂರು ತಾಲೂಕಿನ ಕೊಳ್ಳೂರು.ಎಂ ಗ್ರಾಮದ ರೈತ ವಿರೂಪಾಕ್ಷಯ್ಯಸ್ವಾಮಿ ಸುಮಾರು 4 ಲಕ್ಷ ರೂ. ಸಾಲ ಮಾಡಿಕೊಂಡು ತಮ್ಮ 2 ಎಕರೆ ಜಮೀನಲ್ಲಿ 3 ಸಾವಿರಕ್ಕೂ ಹೆಚ್ಚು ಬಾಳೆ ಬೆಳೆ ಬೆಳೆದಿದ್ದ ಆದರೆ ಕರೆಂಟ್ ಕಣ್ಣಾಮುಚ್ಚಾಲೆ ಆಟದಿಂದ ಬೆಳೆಗೆ ಸರಿಯಾದ ಸಮಯಕ್ಕೆ ನೀರಿನಾಂಶ ದೊರಕದೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿ ರೈತನನ್ನ ಚಿಂತಾಗ್ರಸ್ಥನನ್ನಾಗಿ ಮಾಡಿದೆ.!
ಕೃಷಿಯೇ ಜೀವಾಳು ಎಂದು ನಂಬಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ ರೈತ ವಿರೂಪಾಕ್ಷಯ್ಯಸ್ವಾಮಿಗೆ ಬಾಳೆ ಬೆಳೆಯಲು ಮಾಡಿರುವ ಸಾಲ ತೀರಿಸುವುದು ಹೇಗೆ? ಎಂಬ ಚಿಂತೆ ರೈತನನ್ನ ಹಗಲಿರಳು ಕಾಡಲಾರಂಭಿಸಿದೆ, ಮಳೆ ಕೊರತೆ, ಅತಿವೃಷ್ಟಿ ಹೀಗೆ ಹಲವು ಬಾಧೆಗೆ ರೈತ ತುತ್ತಾಗಿ ದಿಕ್ಕು ತೋಚದೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾನೆ,
ತುಂಬಿ ನಿಂತ ಬಾಳೆ ಬೆಳೆಗೆ ನೀರು ಕಾಣದೆ ಬೆಳೆ ಹಾನಿಯಾಗಿದ್ದು ಕಂಡು ರೈತನ ಎದೆಗೆ ಸಿಡಿಲು ಬಡಿದಾಂತಾಗಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ಒಕ್ಕೂರಳಿನಿಂದ ಆಗ್ರಹಿಸಿದ್ದಾನೆ, ಒಂದು ವೇಳೆ ಪರಿಹಾರ ನೀಡಲು ಜಿಲ್ಲಾಡಳಿತ ನಿರ್ಲಕ್ಷ್ಯಧೋರಣೆ ತೋರಿದರೆ ಡಿಸಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾನೆ.
ವಿದ್ಯುತ್ಗೆ ಬೆಳೆ ಹಾನಿಯಾಗಿದ್ದು ಕಂಡು ದಿಕ್ಕು ತಿಳಿಯದಂತಾಗಿದೆ, ತುಂಬಿ ನಿಂತ ಬೆಳೆ ಸಂಪೂರ್ಣ ನಾಶವಾಗಿದೆ ಸಾಲವನ್ನು ಹೇಗೆ ತೀರಿಸುವುದು ತಿಳಿಯದಾಗಿದೆ ಎಂದು ರೈತ ವಿರೂಪಾಕ್ಷಯ್ಯಸ್ವಾಮಿ ಅಳಲು ತೋಡಿಕೊಂಡಿದ್ದಾನೆ.