ರಾತ್ರಿ ಕರ್ಫ್ಯೂ ವಾಪಸ್ ಪಡೆದ ಸರ್ಕಾರ
ರಾತ್ರಿ ಕರ್ಫ್ಯೂ ವಾಪಸ್ ಪಡೆದ ಸರ್ಕಾರ
ಬೆಂಗಳೂರಃ ಕೊರೊನಾ ರೂಪಾಂತರ ಪಡೆದು ಅವಾಂತರ ಸೃಷ್ಟಿಸುತ್ತಿರುವ ಹಿನ್ನೆಲೆ ರಾಜ್ಯದಲ್ಲೂ ಮುಂಜಾಗೃತವಾಗಿ ರಾತ್ರಿ ಕರ್ಫ್ಯೂ ಜಾರಿಗೆ ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದರು, ಆದರೆ ಇಂದು ರಾತ್ರಿ ಜಾರಿ ಆಗಬೇಕಿದ್ದ ನೈಟ್ ಕರ್ಫ್ಯೂ ಆದೇಶವನ್ನ ಸಿಎಂ ಯಡಿಯೂರಪ್ಪ ದಿಡೀರನೆ ವಾಪಸ್ ಪಡೆದಿದ್ದಾರೆ.
ನೈಟ್ ಕರ್ಫ್ಯೂ ರಾತ್ರಿ 11 ರಿಂದ ಬೆಳಗಿನ ಜಾವ 5 ಗಂಟೆವರೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಈ ಸಮಯ ಯಾವುದೇ ಉಪಯೋಗಕ್ಕೆ ಬಾರದ್ದಾಗಿದೆ. ಇದರಿಂದ ಯಾವುದೇ ಉಪಯೋಗವಾಗದು ಎಂದು ಮಾಧ್ಯಮಗಳು ಟೀಕಾ ಪ್ರಹಾರ ನಡೆಸಿದ್ದವು.
ಹೀಗಾಗಿ ಸಿಎಂ ಬಿಎಸ್ ವೈ ನೈಟ್ ಕರ್ಫ್ಯೂ ಆದೇಶ ಹಿಂಪಡೆದಿದ್ದಾರೆ ಎನ್ನಲಾಗಿದೆ.
ಡಿ.24 ರಿಂದ ಜನೇವರಿ 2 ವರೆಗೂ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದ ಸರ್ಕಾರ ಇಂದು ದಿಡೀರನೆ ಕರ್ಫ್ಯೂ ಜಾರಿ ನಿರ್ಧಾರದಿಂದ ಹಿಂದೆ ಸರಿದಿದೆ.
ರಾತ್ರಿ ಕರ್ಫ್ಯೂ ಗೆ ವಿರೋಧಿಸಿದ್ದ ಯತ್ನಾಳ್
ನೈಟ್ ಕರ್ಫ್ಯೂ ದಿಂದ ಯಾವುದೇ ಉಪಯೋಗವಿಲ್ಲ. ಸಾರ್ವಜನಿಕರು ಸ್ವಯಂ ನಿರ್ಭಂಧ ಹೇರಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಅಲ್ಲದೆ ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸುವ ಮೂಲಕ ಬ್ರಿಟನ್ ಕೊರೊನಾ ತಡೆಗೆ ಎಚ್ಚರಿಕೆವಹಿಸಬೇಕೆಂದು ಅವರು ಮನವಿ ಮಾಡಿದ್ದರು.
ಬ್ರಿಟನ್ ಸೇರಿದಂತೆ ಇತರೆ ದೇಶಗಳಲ್ಲಿ ರೂಪಾಂತರ ಕೊರೊನಾ ಪತ್ತೆಯಾಗಿರುವ ಹಿನ್ನೆಲೆ ಅದರ ಆಕ್ರಮಣಾಕಾರಿ ಕೃತ್ಯವು ರಾಜ್ಯದಲ್ಲಿ ಹರಡದಂತೆ ತಡೆಯಲು ತಜ್ಞರ ಸಲಹೆ ಮೇರೆಗೆ ಕರ್ಫ್ಯೂ ಜಾರಿಗೆ ಸಹಮತ ವ್ಯಕ್ತಪಡಿಸಿತ್ತು.