Homeಜನಮನಪ್ರಮುಖ ಸುದ್ದಿ

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರ- ಬೋಟ್‌ ಮಗುಚಿ 9 ಮೀನುಗಾರರು ಮೃತ್ಯು

ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮಗುಚಿದ್ದು, 9 ಮೀನುಗಾರರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮೀನುಗಾರಿಕೆ ಸಲುವಾಗಿ ಪಶ್ಚಿಮ ಬಂಗಾಳದ ಸುಂದರಬನ್ಸ್ನಿಂ ದ ಬುಧವಾರ ತೆರಳಿದ್ದ ಬೋಟ್‌ನಲ್ಲಿ 17 ಮಂದಿ ಇದ್ದರು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇ ಶಕ ಸುರಜಿತ್ ಬಾಗ್ ತಿಳಿಸಿದ್ದಾರೆ.

ಬಘೆರ್ ಚಾರ್ ದ್ವೀಪದ ಬಳಿ ಚಂಡಮಾರುತ ಅಪ್ಪಳಿಸಿದೆ. ಆ ವೇಳೆ ಎಂಟು ಮಂದಿ ಬೋಟ್‌ ಡೆಕ್ನಲ್ಲಿದ್ದರು. ಉಳಿದವರು ಕ್ಯಾಬಿನ್‌ನಲ್ಲಿ ಮಲಗಿದ್ದರು ಎಂದು ಹೇಳಿದ್ದಾರೆ.

‘ಎತ್ತರದ ಅಲೆಗಳು ಅಪ್ಪಳಿಸಿದ್ದರಿಂದ ಬೋ ಟ್, ಮಗುಚಿದೆ. ಡೆಕ್ನಲ್ಲಿದ್ದ ಎಂಟು ಮಂ ದಿಯನ್ನು ಮತ್ತೊಂದು ಬೋಟ್‌ನಿಂದ ರಕ್ಷಿಸಲಾಗಿದೆ. ಶೋಧದ ಕಾರ್ಯ ನಡೆಯುತ್ತಿದ್ದು,ಮಲಗಿದ್ದ 9 ಮೀನುಗಾರರು ಪತ್ತೆಯಾಗಿಲ್ಲ. ಅವರೆಲ್ಲ ಮೃತಪಟ್ಟಿರುವ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ

Related Articles

Leave a Reply

Your email address will not be published. Required fields are marked *

Back to top button