ಮನೆ ಯಜಮಾನನ ಸಮಯ ಪ್ರಜ್ಞೆ ತಪ್ಪಿದ ಅನಾಹುತ
ಮನೆ ಯಜಮಾನನ ಸಮಯ ಪ್ರಜ್ಞೆ ತಪ್ಪಿದ ಅನಾಹುತ
ಯಾದಗಿರಿಃ ಜಿಲ್ಲೆಯ ಶಹಾಪುರದ ಗಣೇಶ ನಗರದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಹೊರ ಸೂಸುತ್ತಿರುವ ಗಾಳಿಯನ್ನು ವಾಸನೆ ಮೂಲಕ ಗಮನಿಸಿದ ಮನೆ ಮಾಲೀಕನ ಸಮಯ ಪ್ರಜ್ಞೆಯಿಂದ ಸಿಲೆಂಡರನ್ನು ಮನೆ ಹೊರಗಡೆ ರಸ್ತೆ ಮೇಲೆ ತಂದಿರಿಸುವ ಮೂಲಕ ಅನಾಹುತವೊಂದು ತಪ್ಪಿದಂತಾಗಿದೆ.
ಹೌದು ಮನೆ ಮಾಲೀಕ ಓಂಪ್ರಕಾಶ ಮಂಚಾಲೆ ಹೇಳುವ ಪ್ರಕಾರ ಗ್ಯಾಸ್ ವಾಸನೆ ಬರುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡು ಲೀಕೇಜ್ ಆಗುತ್ತಿರುವದನ್ನು ಗಮನಿಸಿ ಮನೆಯಿಂದ ಎಲ್ಲರನ್ನೂ ಹೊರಗಡೆ ಕಳುಹಿಸಿ ದಪ್ಪ ಬಟ್ಟೆ ಸುತ್ತಿ ಅದನ್ನು ಸಾವಕಾಶವಾಗಿ ಹೊರಗಡೆ ತಂದಿಡಲಾಯಿತು ಎಂದು ಆತಂಕದಿಂದಲೇ ತಿಳಿಸಿದ.
ಹೊರಗಡೆ ತಂದಿಡುತ್ತಿದ್ದಂತೆ ಸಿಲೆಂಡರ್ ಮೂಲಕ ಗ್ಯಾಸ್ ದೊಡ್ಡ ಪ್ರಮಾಣದಲ್ಲಿ ಹೊರ ಸೂಸುವ ಮೂಲಕ ಗಾಳಿಯಲ್ಲಿ ವಿಲೀನವಾಯಿತು, ಒಂದು ಸಣ್ಣ ಕಡ್ಡಿ ಕೊರೆದಿದ್ದರೂ ಅಥವಾ ವಿದ್ಯುತ್ ಬಲ್ಬ್ ಬಳಸಲು, ಟಿವಿ, ಫ್ಯಾನ್ ಹಾಕಲು ಬಟನ್ ಆನ್ ಆಫ್ ಮಾಡಿದ್ದರೂ ಬ್ಲಾಸ್ಟ್ ಆಗುವ ಸಂಭವವಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಪೂರ್ಣ ಪ್ರಮಾಣ ಗ್ಯಾಸ್ ಸೂಸಿದ ನಂತರ ಅದನ್ನು ಪಕ್ಕದ ಖಾಲಿ ಜಾಗದಲ್ಲಿ ಇಟ್ಟು ಪರಿಶೀಲಿಸಿದರು. ಇದೇ ವೇಳೆಗೆ ಗ್ಯಾಸ್ ಏಜೆನ್ಸಿದವರಿಗೆ ಗ್ರಾಹಕ ಓಂಪ್ರಕಾಶ ಅವರು ಕಾಲ್ ಮಾಡಿ ಸಮಸ್ಯೆ ತಿಳಿಸಿದರೂ ಯಾರೊಬ್ಬರು ಭೇಟಿ ನೀಡದಿರುವದು ಸ್ಥಳದಲ್ಲಿ ನೆರೆದಿದ್ದ ನಾಗರಿಕರಿಂದ ಆಕ್ರೋಶ ವ್ಯಕ್ತವಾಯಿತು.
ಈ ಕುರಿತು ಪೊಲೀಸ್ ಠಾಣೆಗೆ ಇದೀಗ ಮಾಹಿತಿ ನೀಡಲಾಗಿದೆ ಎಂದು ಗಣೇಶ ನಗರದ ನಿವಾಸಿಯೊಬ್ಬರು ತಿಳಿಸಿದ್ದಾರೆ.