ಬುಲೆಟ್ ಟ್ರೇನ್ ಕಾಮಗಾರಿಗೆ ಶಿಲಾನ್ಯಾಸ
ಬುಲೆಟ್ ಟ್ರೇನ್ ಕಾಮಗಾರಿಗೆ ಶಿಲಾನ್ಯಾಸ
ಗುಜರಾತ್ಃ ಇಲ್ಲಿನ ಅಹಮದಾಬಾದ್ ನಗರದ ಅಥ್ಲೆಟಿಕ್ ಮೈದಾನದಲ್ಲಿ ಇಂದು ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ದೇಶದ ಪ್ರಧಾನಿ ಶಿಂಜೋ ಅಬೆ ಬುಲೆಟ್ ಟ್ರೇನ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಶಿಲಾನ್ಯಾಸ ಬಳಿಕ ಮಾತನಾಡಿದ ಜಪಾನ್ ಪ್ರಧಾನಿ ಶಿಂಜೋ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ದೂರ ದೃಷ್ಟಿಯುಳ್ಳ ನಾಯಕರಾಗಿದ್ದಾರೆ. ಅವರ ಸ್ನೇಹ ನಮಗೆ.ಖುಷಿ ತಂದಿದೆ. ಬುಲೆಟ್ ಟ್ರೇನ್ ಕಾಮಗಾರಿಗೆ ಚಾಲನೆ ದೊರೆತಿರುವುದು ಐತಿಹಾಸಿಕ ನಿರ್ಣಯವಾಗಿದೆ.
ಬುಲೆಟ್ ಟ್ರೇನ್ ನಲ್ಲಿ ಸುರಕ್ಷಿತ ಮತ್ತು ಸುವ್ಯವಸ್ಥೆ ಎರಡು ಇವೆ. ಭಾರತದಲ್ಲಿ ಬುಲೆಟ್ ಟ್ರೇನ್ ಯೋಜನೆ ಜಾರಿಗೆ ೦.೧ ತೀರ ಕಡಿಮೆ ಬಡ್ಡಿದರ ದಲ್ಲಿ ೮೮ ಸಾವಿರ ಕೋಟಿ ನೀಡಲಾಗಿದೆ.
ಭಾರತ ಬೆಳೆದು ಶಕ್ತಿ ಶಾಲಿಯಾದರೆ, ನಮಗೂ ಹೆಮ್ಮೆ. ಜಪಾನ್-ಭಾರತ ಸ್ನೇಹ ವೃದ್ಧಿಗೆ ಇದು ಮಹತ್ವದ ಹೆಜ್ಜೆ. ಎರಡು ಆಪ್ತ ದೇಶಗಳ ವಿಶ್ವಾಸ, ಸಹಕಾರ ಸದಾ ಹೀಗೆ ಇರಲಿ ಎಂದು ಹರಸಿದರು.
ಮುಂದಿನ ದಿನಗಳಲ್ಲಿ ಭಾರತಕ್ಕೆ ಬಂದಾಗ ಗುಜರಾತ್ ನಿಂದ ಮುಂಬೈವರೆಗೂ ಬುಲೆಟ್ ಟ್ರೇನ್ ನೊಂದಿಗೆ ನನ್ನ ಮಿತ್ರ ಮೋದಿಯವರ ಜೊತೆ ಸಂಚರಿಸುವ ಕನಸನ್ನು ಬಿತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಗುಜರಾತನ ಅಹಮದಬಾದ್ ದಿಂದ ಮಹಾರಾಷ್ಟ್ರದ ಮುಂಬೈವರೆಗೆ ಈ ಬುಲೆಟ್ ಟ್ರೇನ್ ಚಲಿಸಲಿದ್ದು, ಇದಕ್ಕೆ ಬೇಕಾದ ವ್ಯವಸ್ಥೆ ಕ್ರಮಕೈಗೊಳ್ಳಲಾಗಿದೆ.
ಬುಲೆಟ್ ಟ್ರೇನ್ ಯೋಜನೆಯಿಂದ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯಾವುದೇ ದೇಶ ಮುಂದುವರೆಯಬೇಕಾದರೆ, ಆ ದೇಶದ ಸಂಚಾರ ವ್ಯವಸ್ಥೆ ಮೊದಲು ಉತ್ತಮವಾಗಿರಬೇಕು. ಆ ನಿಟ್ಟಿನಲ್ಲಿ ಬುಲೇಟ್ ಟ್ರೇನ್ ಕಿ.ಮೀ.ಒಂದಕ್ಕೆ 320-350 ಕಿ.ಮೀ ಸ್ಪೀಡ್ ನಲ್ಲಿ ಬುಲೆಟ್ ಟ್ರೇನ್ ಚಲಿಸಲಿದೆ.
ದೇಶದ ಅಭಿವೃದ್ಧಿ ಗೆ 88 ಸಾವಿರ ಕೋಟಿ ರೂ.ಜತೆಗೆ ಬುಲೆಟ್ ರೈಲ್ವೆ ಚಲಿಸಲು ಬೇಕಾದ ಮಾರ್ಗ ನಿರ್ಮಿಸಲು ಜಪಾನ್ ನಿಂದ 100 ಜನ ಇಂಜಿನೀಯರನ್ನು ದೇಶಕ್ಕೆ ಕಳಿಸುವ ವ್ಯವಸ್ಥೆಯನ್ನು ಜಪಾನ್ ಪ್ರಧಾನಿಯವರು ಮಾಡಿದ್ದಾರೆ, ಅವರಿಗೆ ತುಂಬಾ ಆಭಾರಿಯಾಗಿದ್ದೇನೆ.
ಅಲ್ಲದೆ ಮಹತ್ವ ಯೋಜನೆಗೆ ನಮ್ಮ ದೇಶದಲ್ಲಿ ಚಾಲನೆ ನೀಡಲು ಸಹಕರಿಸುವ ಮೂಲಕ ಭಾರತ-ಜಪಾನ್ ಸ್ನೇಹ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಿದೆ. ಅಲ್ಲದೆ ಈ ಯೋಜನೆಯಿಂದ ಉದ್ಯೋಗ ಅವಕಾಶಗಳು ಸಾಕಷ್ಟಿವೆ. ಮತ್ತು ಜಪಾನನ ಸಂಪೂರ್ಣ ತಂತ್ರಜ್ಞಾನ ಬಳಕೆಯಾಗಲಿದ್ದು, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಯುವ ಸಮುದಾಯಕ್ಕೆ ಕೆಲಸವು ದೊರೆಯಲಿದೆ.
ಅದಕ್ಕೆ ಬೇಕಾದ ಸೂಕ್ತ ತರಬೇತಿ ನೀಡುವ ವ್ಯವಸ್ಥೆಯು ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್, ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಇತರರು ಉಪಸ್ಥಿತರಿದ್ದರು.