ಕಿಚ್ಚ ಸುದೀಪ್ ದಚ್ಚುಗೆ ಸೋದರಮಾವನಂತೆ ಪ್ರಥಮ ಲೆಕ್ಕಾಚಾರದ ಟ್ವಿಟ್ ನೋಡಿ
ವಿವಿ ಡೆಸ್ಕ್ಃ ನಟ ಕಿಚ್ಚ ಸುದೀಪ್ ದಚ್ಚು ದರ್ಶನ ಅವರಿಗೆ ಸೋದರ ಮಾವನಾಗಬೇಕಂತೆ..ಹೌದು ಈ ಕುರಿತು ಟ್ವಿಟ್ ಮಾಡಿದ ಬಿಗ್ ಬಾಸ್ ವಿನ್ನರ್ ಪ್ರಥಮ ಕುತುಹಲ ಮೂಡಿಸಿದ್ದಾರೆ.
ಕರುನಾಡು ಸಿನಿಮಾಲೋಕದ ಮಿನುಗುತಾರೆಗಳಾದ ಒಂದು ಕಾಲದ ಕುಚ್ಚಿಕುಗಳಾದ ನಟ ದರ್ಶನ ಹಾಗೂ ಕಿಚ್ಚ ಸುದೀಪ ಇಬ್ಬರು ಮುನಿಸಿಕೊಂಡಿರುವದು ಇಡಿ ಸ್ಯಾಂಡಲ್ ವುಡ್ ಗೆ ಗೊತ್ತಿರುವ ವಿಷಯ.
ಆದರೆ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ ಅವರ ನಿನ್ನೆ ಜನ್ಮ ದಿನಾಚರಣೆ ಸಂದರ್ಭದಲ್ಲಿ, ದರ್ಶನ ಅವರು ಮದರ್ ಇಂಡಿಯಾ ಸುಮಲತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವಿಟ್ ಮಾಡಿ ಶುಭಕೋರಿದರೆ,
ಸುದೀಪ ಅವರು, ಸುಮಲತಾ ಅಕ್ಕ ಈ ದಿನ ನಿಮ್ಮ ಪಾಲಿಗೆ ಅದ್ಭುತ ದಿನವಾಗಲಿ, ಆರೋಗ್ಯ ಮತ್ತು ಸಂತೋಷ ಸಿಗಲಿ ಎಂದು ಟ್ವಿಟ್ ಮೂಲಕ ಹಾರೈಸಿದ್ದಾರೆ.
ಇದನ್ನೆ ಪ್ರಥಮ ಲೆಕ್ಕಾಚಾರ ಹಾಕಿ, ಸುದೀಪ ಅವರಿಗೆ ಸುಮಲತಾ ಮೇಡಂ ಅಕ್ಕ ಆದರೆ, ದರ್ಶನ ಅವರಿಗೆ ಅಮ್ಮ ಹೀಗಾಗಿ ಸುದೀಪ ದರ್ಶನವರ ಸೋದರಮಾವ ಆಗುತ್ತಾನೆ ಅಲ್ವಾ..? ಎಂದು ಯೋಚಿಸಿದ ಒಳ್ಳೆ ಹುಡುಗ ಪ್ರಥಮ ಟ್ವಿಟ್ ಸುದೀಪ್ ದಚ್ಚು ಅವರ ಸೋದರಮಾವ ಎಂದು ತಮಾಷೆಯಾಗಿ ಟ್ವಿಟ್ ಮಾಡಿದ್ದಾರೆ.