ಬಸವೇಶ್ವರರಿಗೆ ಅವಮಾನ ಮಾಡಬೇಡಿ ಎಂದು ಮೋದಿ ಹೇಳಿದ್ದಾದರೂ ಏಕೆ.?
ದೆಹಲಿಃ ಲೋಕಸಭೆಯಲ್ಲಿ ಪ್ರಧಾನಿ ಭಾಷಣಕ್ಕೆ ಕಾಂಗ್ರೆಸ್ ಸಂಸದರು ತೀವ್ರ ಅಡ್ಡಿ ಪಡಿಸುವದನ್ನು ಕಂಡು ಪ್ರಧಾನಿ ಮೋದಿಯವರು, ಜಗಜ್ಯೋತಿ ಬಸವೇಶ್ವರರ ಬಗ್ಗೆ ನಿಮಗೆಲ್ಲಾ ಗೊತ್ತು ಕರ್ನಾಟಕದಿಂದ ಬಂದ ಕೆಲ ಸಂಸದರಿಗೆ ಈ ಬಗ್ಗೆ ತಿಳುವಳಿಕೆ ಇದೆ.
12 ನೇ ಶತಮಾನದಲ್ಲಿ ಬಸವೇಶ್ವರರ ಅನುಭವ ಮಂಟಪ ಲೋಕಸಭಾ ಮಾದರಿಯಲ್ಲಿ ಇತ್ತು. ಉತ್ತಮ ಸಲಹೆ ಸೂಚನೆ, ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆ, ಚಿಂತನೆ ನಡಿತಿತ್ತು. ಆದರೆ ಈ ತರಹ ಗದ್ದಲ ಗಲಾಟೆ ಅಲ್ಲ. ಈ ರೀತಿ ಅಡ್ಡಿ ಪಡಿಸುವ ಮೂಲಕ ಬಸವಣ್ಣನವರಿಗೆ ಅವಮಾನ ಮಾಡಬೇಡಿ ಎಂದು ಮೋದಿ ಅವರು ಎಚ್ಚರಿಸಿದ ಪ್ರಸಂಗ ನಡೆಯಿತು.
ಆದಾಗ್ಯೂ ಕಾಂಗ್ರೆಸ್ ಸಂಸದರು ಬಂದ್ ಕರೋ ಬಂದ್ ಕರೋ ಎಂಬ ಘೋಷಣೆ ಮೊಳಗಿಸುವ ಮೂಲಕ ಪ್ರಧಾನಿ ಭಾಷಣಕ್ಕೆ ಅಡ್ಡಿ ಪಡಿಸ್ತಾ ಇರುವುದು ಕಂಡು ಬಂದಿತು. ಹಾಗೇ ಮುಂದುವರೆದು ಮಾತನಾಡಿದ ಮೋದಿ ವಿಚಲಿತಗೊಳ್ಳದೆ ಮಾತನಾಡಿದರು.
ನಿನ್ನೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಕವಿ ಬಶೀರ ಭದ್ರಿಯವರು ಬರೆದ ಕವಿತೆಯ ಸಾಲನ್ನು ಓದಿದರು. ಅದು ಹೀಗಿದೆ. ಶತ್ರುತನವನ್ನು ಮಾಡಿ ಅದು ಮುಂದೆ ಸ್ನೇಹಕ್ಕೆ ತಿರಗುಬೇಕು..ನಾವೇನು ಎದುರಾಳಿಯನ್ನು ದಫನ್ ಮಾಡುವಂತೆ ಕೆಟ್ಟ ಬಯಕೆ ಹೊಂದಿಲ್ಲ. ಆದರೆ ಮುಂದೆ ಇದೇ (ಮೋದಿ ಅವರ ಕಡೆ ಕೈ ಮಾಡಿ) ಜಾಗದಲ್ಲಿ ನಾವು ಕುಳಿತು ಉತ್ತರ ಕೊಡ್ತೀವಿ ಎಂದರು.
ಇಂದು ಪ್ರಧಾನಿ ಅದೇ ಕವಿತೆ ಸಾಲು ನಿಮ್ಮ ಕರ್ನಾಟಕದ ಸಿಎಂ ಸಿದ್ರಾಮಯ್ಯನವರಿಗೆ ಹೇಳಿ ಖರ್ಗೆಜೀ ಅವರಿಗೆ ಅದು ಸರಿ ಹೊಂದುತ್ತದೆ. ನಮಗಲ್ಲ… ಸಿದ್ರಾಮಯ್ಯ ಸುಳ್ಳು ಹೇಳುವದನ್ನು ರೂಢಿಸಿಕೊಂಡಿದ್ದಾರೆ. ಸತ್ಯ ಮರೆಮಾಚಲು ಸಾಧ್ಯವಿಲ್ಲ. ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಜನರ ಶಾಪ ತಟ್ಟದೆ ಬಿಡಲ್ಲ ಎಂದು ಖಾರವಾಗಿ ಎಚ್ಚರಿಸಿದರು.