ಯಾದಗಿರಿಃ ನಾರಾಯಣಪುರ ಡ್ಯಾಮ್ ರಸ್ತೆಗೆ ಹೋದೀರಿ ಜೋಕೆ!
ಯಾದಗಿರಿ: ಜೆಲ್ಲೆ ಸುರಪುರ ತಾಲೂಕಿನ ನಾರಾಯಣಪುರ ಡ್ಯಾಂಗೆ ತೆರಳುವ ಮಾರ್ಗ ಮದ್ಯದ ರಸ್ತೆಯ ಸೇತುವೆ ಕುಸಿತಗೊಂಡಿರುವ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿದೆ.ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಮಳೆ ನೀರಿನಿಂದಾಗಿ ಸೇತುವೆ ಅಭದ್ರತೆಗೊಂಡ ಕಾರಣ ಕುಸಿದಿದೆ ಎಂದು ಹೇಳಲಾಗುತ್ತದೆ. ಪ್ರಸ್ತುತ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದೆ.
ಹೀಗಾಗಿ ನಾರಾಯಣಪುರದಿಂದ ಬಸವಸಾಗರ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ನಾರಾಯಣಪುರ ಬಳಿಯ ಕೋರಿ ಸಂಗಯ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯ ಮಾರ್ಗವು ಇದೇ ಆಗಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಅಲ್ಲದೆ ನಾರಾಯಣಪುರ ಡ್ಯಾಂನಿಂದ NLBC (ನಾರಾಯಣಪುರ ಎಡದಂಡೆ ಕಾಲುವೆ) ಕಾಲುವೆಗೆ ನೀರು ಹರಿಸುವ ಸ್ಥಳದಲ್ಲಿರುವ ಈ ಸೇತುವೆ ಸಂಚಾರ ಸ್ಥಗಿತಗೊಂಡ ಪರಿಣಾಮ ಮುರುಡೇಶ್ವರ ಪವರ್ ಕಾರ್ಪೋರೇಶನ್ ಕಾರ್ಯಕ್ಕು ಮತ್ತು ಕೆಬಿಜೆಎನ್ ಎಲ್ ಕಾರ್ಯಚಟುವಟಿಕೆಗೆ ತೊಂದರೆಯಾಗಿದೆ. ಕೂಡಲೆ ಸೇತುವೆ ದುರಸ್ಥಿ ಕಾರ್ಯ ಕೈಗೊಳ್ಳಬೇಕೆಂದರೆ, ಡ್ಯಾಂನಿಂದ ಸಾಕಷ್ಟು ಪ್ರಮಾಣದ ನೀರು ನದಿಗೆ ಹರಿ ಬಿಡಲಾಗಿದೆ.
ನೀರಿನ ರಭಸ ಮತ್ತು ಕಳೆದ ಹದಿನೈದು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಸೇತುವೆ ಕುಸಿತದ ವೇಳೆ ಯಾವುದೆ ವಾಹನ ಜನ- ಜಾನುವಾರುಗಳ ಸಂಚಾರವಿರಲಿಲ್ಲ. ಇಲ್ಲವಾದಲ್ಲಿ ದೊಡ್ಡ ಅನಾಹುತವೇ ನಡೆಯುತಿತ್ತು. ಸಧ್ಯ ಯಾವುದೆ ಪ್ರಾಣಹಾನಿ ಘಟನೆ ನಡೆಯದಿರುವುದೆ ನೆಮ್ಮದಿ ಮೂಡಿಸಿದೆ.