ಪ್ರಮುಖ ಸುದ್ದಿ

ಅಕ್ರಮವಾಗಿ ಡಿಎಪಿ ಸಾಗಾಣಿಕೆ ಓರ್ವ ಆರೋಪಿ ಬಂಧನ

ಅಕ್ರಮವಾಗಿ ಡಿಎಪಿ ಸಾಗಾಣಿಕೆ ಓರ್ವ ಆರೋಪಿ ಬಂಧನ

yadgiri, ಶಹಾಪುರಃ ಮುಡಬೂಳ ಗ್ರಾಮದಿಂದ ಲಾರಿಯೊಂದರಲ್ಲಿ ನಗರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 298 ಪಾಕೆಟ್ ಜೈ ಕಿಸಾನ್ ಮಂಗಳ ಡಿಎಪಿ ರಸಗೊಬ್ಬರವನ್ನು ಯಾವುದೇ ಬಿಲ್ ಇಲ್ಲದೆ ಸಾಗಾಣಿಕೆ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಕೃಷಿ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಲಾರಿ ಜಪ್ತಿ ಮಾಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ರವಿವಾರ ನಡೆದಿದೆ.

ಆರೋಪಿ ಗುರು ದೇಸಾಯಿ ಸಾ.ನೆಲೋಗಿ ಎಂಬುವರನ್ನು ಬಂಧಿಸಲಾಗಿದೆ. ಲಾರಿ ಸಮೇತ ರಸಗೊಬ್ಬರ ಪಾಕೆಟ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ರಸಗೊಬ್ಬರಕ್ಕೆ ಯಾವುದೇ ಬಿಲ್ ಇಲ್ಲದೆ ಸಾಗಾಣಿಕೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಗೊಬ್ಬರ ಪಾಕೆಟ್‍ಗಳು ನಕಲಿ ಇರಬಹುದೆಂದು ಶಂಕಿಸಲಾಗಿದೆ. ಎಫ್‍ಎಸ್‍ಎಲ್ ಪರೀಕ್ಷೆ ನಂತರವೇ ರಸಗೊಬ್ಬರ ನಕಲಿ ಅಥವಾ ಅಸಲಿ ಕುರಿತು ಅಧಿಕೃತವಾಗಿ ತಿಳಿದು ಬರಲಿದೆ ಎಂದು ಭೀಮರಾಯನ ಗುಡಿ ಪಿಎಸ್‍ಐ ರಾಜಕುಮಾರ ಜಾಮಗೊಂಡ ತಿಳಿಸಿದ್ದಾರೆ.

ಈ ಅಕ್ರಮ ರಸಗೊಬ್ಬರ ಸಾಗಾಣಿಕೆಯಲ್ಲಿ ಇನ್ನೂ ಹಲವರಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ. ಈ ಕುರಿತು ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ತಹಸೀಲ್ದಾರ ಜಗನ್ನಾಥರಡ್ಡಿ, ಗೋಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮರೇಶ ಸೇರಿದಂತೆ ಪೊಲೀಸರು ಇದ್ದರು.

Related Articles

Leave a Reply

Your email address will not be published. Required fields are marked *

Back to top button