ಪ್ರಮುಖ ಸುದ್ದಿ
ನಿಂತ ಲಾರಿಗೆ ಕಾರ್ ಡಿಕ್ಕಿ ಗರ್ಭೀಣಿ ಸೇರಿ 7 ಮಂದಿ ದುರ್ಮರಣ
ಕಲಬುರ್ಗಿಃ ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ ಗರ್ಭೀಣಿ ಸೇರಿ 7 ಮಂದಿ ಸಾವು
ಕಲಬುರ್ಗಿಃ ಇಂದು ರವಿವಾರ ಬೆಳ್ಳಂಬೆಳಗ್ಗೆ ಕಾರೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರೊಳಗಿದ್ದ ಗರ್ಭೀಣಿ ಮಹಿಳೆ ಸೇರಿದಂತೆ 7 ಮಂದು ಸಾವನ್ನಪ್ಪಿದ್ದ ಘಟನೆ ತಾಲೂಕಿನ ಆಳಂದ ರಸ್ತೆ ಸಾವಳಗಿ ಕ್ರಾಸ್ ಬಳಿ ನಡೆದಿದೆ.
ಗರ್ಭೀಣಿಯನ್ನು ಕಲಬುರ್ಗಿಗೆ ಆಸ್ಪತ್ರೆಗಾಗಿ ಕರೆದುಕೊಂಡು ಹೋಗುತ್ತಿರುವಾಗ ಈ ದುರಂತ ಸಂಭವಿಸಿದೆ.
ಗರ್ಭೀಣಿ ಇರ್ಫಾನಾ ಬೇಗಂ (25), ರುಬಿಯಾ ಬೇಗಂ(50), ಅಬೇದಾಬಿ ಬೇಗಂ (50), ಜಯಚುನಬಿ (60) ಮತ್ತು ಮನೀರ್ (28), ಮಹ್ಮದ್ ಅಲಿ (38), ಶೌಖತ್ ಅಲಿ (29) ಎಂಬುವರೇ ಮೃತಪಟ್ಟ ದುರ್ದೈವಿಗಳು.
ಘಟನಾ ಸ್ಥಳಕ್ಕೆ ನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಪೊಲೀಸರಿಗೆ ಸಹಕರಿಸಿದರು.