ದರ್ಶನ್ ಗೆ ಮಾತಿನ ಮೇಲೆ ಹಿಡಿತವಿಲ್ಲ, ವೇಟರ್ ಮೇಲೆ ಹಲ್ಲೆ – ಇಂದ್ರಜೀತ್ ಲಂಕೇಶ್ ಕಿಡಿ
ದರ್ಶನ್ ಗೆ ಮಾತಿನ ಮೇಲೆ ಹಿಡಿತವಿಲ್ಲ, ವೇಟರ್ ಮೇಲೆ ಹಲ್ಲೆ – ಇಂದ್ರಜೀತ್ ಲಂಕೇಶ್ ಕಿಡಿ
ಬೆಂಗಳೂರಃ ರೈತರ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ, ನಟ ದರ್ಶನ್ ಆಡುವ ಮಾತು ಹೇಳಿಕೆ ಮೇಲೆ ಹಿಡಿತವಿಲ್ಲ. ಓರ್ವ ವೇಟರ್ ಮೇಲೆ ಹಲ್ಲೆ ಮಾಡಿದ್ದು, 25 ಕೋಟೆ ವಂಚನೆ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಯಲಿ ಅದು ಬಿಟ್ಟು ರಾಜಿ ಸಂಧಾನ ಮೂಲಕ ಪ್ರಕರಣ ಮುಚ್ಚಿ ಹಾಕುವ ಕೆಲಸವಾಗಬಾರದು ಸತ್ಯ ಬಯಲಾಗಬೇಕು ಎಂದು ಇಂದ್ರಜೀತ್ ಲಂಕೇಶ್ ಹೇಳಿದರು.
ರಾಜ್ಯ ಗೃಹ ಸಚಿವರನ್ನು ಭೇಟಿ ಯಾಗಿ ದಲಿತ ವೇಟರ್ ಮೇಲೆ ಹಲ್ಲೆ ಮತ್ತು 25 ಕೋಟಿ ವಂಚನೆ ಪ್ರಕರಣ ಸೇರಿದಂತೆ ಇತರೆ ಸೆಲೆಬ್ರಿಟಿ ವರ್ತನೆ ಮಿತಿ ಮೀರುತ್ತಿರುವ ಕುರಿತು ಕ್ರಮಕ್ಕೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಇತ್ತಿಚೆಗೆ ಸೆಲೆಬ್ರಿಟಿಗಳ ದೌರ್ಜನ್ಯ ಹೆಚ್ವಾಗುತ್ತಿದೆ. ಇದರಿಂದ ಬಡವರು, ಅಸಹಾಯಕರ ಸ್ಥಿತಿ ಯಾರು ಕೇಳದಂತಾಗಿದೆ. ಹೊಟೇಲ್ ವೊಂದರಲ್ಲಿ ದಲಿತ ವ್ಹೇಟರ್ ಓರ್ವನ ಮೇಲೆ ದರ್ಶನ್ ಹಾಗೂ ಸ್ನೇಹಿತರು ಹಲ್ಲೆ ನಡೆಸಿದ್ದು, ಈ ಕುರಿತು ಕ್ರಮಕೈಗೊಳ್ಳಬೇಕೆಂದು ಗೃಹಸಚಿವರಿಗೆ ಮನವಿ ಮಾಡಿದ್ದೇನೆ.
ದರ್ಶನ್ ಹಲ್ಲೆ ಮಾಡಿಲ್ಲ ಎಂದಾದರೆ, ಆಣೆ ಮಾಡಿ ಹೇಳಲಿ ಅದಕ್ಕೆ ಬೇಕಾದ ಸಾಕ್ಷಿಆಧಾರಗಳು ನನ್ನ ಬಳಿ ಇವೆ ಎಂದು ಅವರು ಬಾಂಬ್ ಸಿಡಿಸಿಸದರು.
ಅಲ್ಲದೆ 25 ಕೋಟಿ ವಂಚನೆ ಪ್ರಕರಣ ಕುರಿತು ಅರುಣಾಕುಮಾರಿ ತಪ್ಪು ಮಾಡಿದ್ದರೆ ಬಯಲಿಗೆ ಬರಲಿ, ಆ ಯುವತಿಯನ್ನು ದರ್ಶನ ತನ್ನ ತೋಟದ ಮನೆಗೆ ಕರೆದೊಯ್ದು ಬೆದರಿಕೆ ಹೊಡ್ಡಿದರಾ.? ಏನ್ ಇದು ಸಿನಿಮಾ ಕಥೆನಾ ಇವರು ಹೇಳಿದ್ದೆಲ್ಲ ಒಪ್ಕೊಲಿಕ್ಕೆ ವಾಸ್ತವಿಕ ಸ್ಥಿತಿ ಏನಾಗಿದೆ ಎಂಬುದು ಹೊರ ಬರಲಿ. ಪೊಲೀಸರು ತನಿಖೆ ನಡೆಸಲಿ ಪೊಲೀಸರೇನು ಬಳೆ ತೊಟ್ಕೊಂಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
25 ಕೋಟಿ ವಂಚನೆ ಪ್ರಕರಣ ಕುರಿತು ಸತ್ಯಾಂಶ ಬಯಲಾಗಬೇಕು, ಸುಮ್ನೆ ಒಂದು ಕಥೆ ಕಟ್ಟಿ ಮುಚ್ಚಾಕೋ ಪ್ರಯತ್ನ ಬೇಡ. ಸೆಲೆಬ್ರಿಟಿಗಳು ದಲಿತರ ವೇಟರ ಮೇಲೆ ದಾಳಿ ನಡೆಸಿದ ಪರಿಣಾಮ ಆ ಹುಡುಗನ ಕಣ್ಣು ಮಂಜಾಗಿದೆ. ಮುಂದಿನ ಅವನ ಭವಿಷ್ಯ ಯಾರು ಜವಬ್ದಾರರು.? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಕರಣ ಕುರಿತು ತನಿಖೆ ನಡೆಯಲಿ ಅನ್ಯಾಯವಾದವರಿಗೆ ನ್ಯಾಯ ದೊರೆಯಲಿ. ನಾನು ಯಾರ ಪರ ಇಲ್ಲ. ಸತ್ಯಾಂಶ ಹೊರ ಬರಲಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರೆಯಲಿ ಅಷ್ಟೆ ಎಂದು ಅವರು ಗುಡುಗಿದರು.