ತ್ವರಿತವಾಗಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ದರ್ಶನಾಪುರ ಸೂಚನೆ
ತ್ವರಿತವಾಗಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ದರ್ಶನಾಪುರ ಸೂಚನೆ
yadgiri, ಶಹಾಪುರ: ನಗರದ ಹೊರವಲಯದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯ ಆಶ್ರಯದಲ್ಲಿ 11 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 200 ಮನೆಗಳ ಕಟ್ಟಡ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು, ಈಗಾಗಲೇ 150 ಮನೆಗಳು ಸಿದ್ಧಗೊಂಡಿವೆ. ಬಾಕಿ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಕಂಪನಿಯ ಗುತ್ತಿಗೆದಾರನಿಗೆ ಶಾಸಕ ಶರಣಬಸಪ್ಪ ದರ್ಶನಾಪುರ ಸೂಚಿಸಿದರು.
ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆಗಳ ಕಟ್ಟಡ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಜಿ ಪ್ಲಸ್ 2 ಅಡಿಯಲ್ಲಿ ಮನೆ ಸಿದ್ದಗೊಂಡಿವೆ. ಪ್ರತಿ ಮನೆ ನಿರ್ಮಾಣಕ್ಕೆ 4.90 ಲಕ್ಷ ವೆಚ್ಚ ತಗುಲಿದೆ. 3.20 ಗುಂಟೆ ಜಮೀನು ವಶಪಡಿಸಿಕೊಂಡು ಉತ್ತಮ ಮನೆ ನಿರ್ಮಾಣಕ್ಕೆ ಅವಕಾಶ ನೀಡಿದೆ. ನಿರೀಕ್ಷೆಯಂತೆ ಕೆಲಸ ಮುಕ್ತಾಯವಾದರೆ ಜನೇವರಿಯಲ್ಲಿ ಮನೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದನೆಗೆ ಸಲ್ಲಿಸಲಾಗಿದೆ ಎಂದರು.
ಇನ್ನೂ ಸಾವಿರ ಮನೆ: ಮತ್ತೆ ಸಾವಿರ ಮನೆ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಕೊಳಚೆ ನಿರ್ಮೂಲನಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ. ವಸತಿ ಸಚಿವ ವಿ.ಸೊಮಣ್ಣ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಅನುಮೋದನೆ ದೊರೆತರೆ ಬಡ ಜನತೆಗೆ ಸೂರಿನ ಭಾಗ್ಯ ಲಭಿಸಲಿದೆ ಎಂದು ದರ್ಶನಾಪುರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಂಜಿನೀಯರ್ ಹೊನ್ನೇಶ ಯಾಳಗಿ, ಅಮರನಾಥ, ಸಯ್ಯದ್ ಮನನ್ ಇದ್ದರು.