ಪ್ರಮುಖ ಸುದ್ದಿ
ಪ್ರವಾಹ ಪೀಡಿತ ರೋಜಾ ಗ್ರಾಮಕ್ಕೆ ದರ್ಶನಾಪುರ ಭೇಟಿ
ಪ್ರವಾಹ ಪೀಡಿತ ರೋಜಾ ಗ್ರಾಮಕ್ಕೆ ದರ್ಶನಾಪುರ ಭೇಟಿ
ಶಹಾಪುರಃ ಭೀಮಾನದಿ ನೀರು ಸುತ್ತುವರೆದ ಪರಿಣಾಮ ನಡುಗಡ್ಡೆಯಾದ ಅಣಬಿ ರೋಜಾ ಗ್ರಾಮಕ್ಕೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಬೆಳಗ್ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶದ ಬೆಳೆ ಹಾನಿ ಕುರಿತು ಪರಿಹಾರ ಬರಲಿದೆ. ಸದ್ಯಕ್ಕೆ ಕಾಳಜಿ ಕೇಂದ್ರದಲ್ಲಿ ಇರಿ. ಸಮರ್ಪಕ ವ್ಯವಸ್ಥೆ ಮಾಡಲು ತಹಶೀಲ್ದಾರರಿಗೆ ಹೇಳಿದ್ದೇನೆ.
ಊಟ, ವಸತಿ, ನೀರಿನ ವ್ಯವಸ್ಥೆ ಮಾಡುತ್ತಾರೆ. ಸಂಪೂರ್ಣ ಪ್ರವಾಹ ಕಡಿಮೆಯಾಗುವವರೆಗೂ ಕಾಳಜಿ ಕೇಂದ್ರದಲ್ಲಿಯೇ ಇರಿ. ಸರ್ಕಾರದಿಂದ ಸಮಗ್ರ ಸಮೀಕ್ಷೆ ನಡೆಸಿದ ನಂತರ ಪರಿಹಾರ ಹಣ ಖಾತೆಗೆ ಜಮೆ ಮಾಡಲಾಗುತ್ತದೆ. ಯಾರೊಬ್ಬರು ಆತಂಕ ಬೀಳುವ ಅಗತ್ಯ ವಿಲ್ಲ. ಎಂದು ಸಂತ್ರಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಮುಖಂಡ ಹೊನ್ನಪ್ಪ ಸಾಹು ಅಂಗಡಿ ಸೇರಿದಂತೆ ಇತರರು ಇದ್ದರು.