ಕಥೆ

ಇತರರ‌ ಪರಿಸ್ಥಿತಿ ಅರ್ಥೈಸಿಕೊಳ್ಳುವ ಶಕ್ತಿ ನಿಮ್ಮಲಿದೆಯೇ.? ಈ ಕಥೆಯನ್ನೋದಿ

ದಿನಕ್ಕೊಂದು ಕಥೆ

ನಮ್ಮ ತಂದೆ ತಾಯಿಯರ ಶ್ರಮದ ಮೌಲ್ಯ

ಒಬ್ಬ ಯುವಕ ಒಂದೊಳ್ಳೆಯ ಕೆಲಸಕ್ಕಾಗಿ ಒಂದು ದೊಡ್ಡ ಕಂಪನಿಗೆ ಸಂದರ್ಶನಕ್ಕೆ ಹೋದ. ಎಲ್ಲಾ ಪರೀಕ್ಷೆಗಳಲ್ಲಿ ಉತೀರ್ಣನಾದ…. ಕೊನೆಗೆ ಡೈರೆಕ್ಟರ್ ಬಳಿ ಹೋದ.

ಡೈರೆಕ್ಟರ್: ನೀನು ಓದುವಾಗ ಯಾವುದಾದರೂ ಸ್ಕಾಲರ್ ಶೀಪ್ ಬಂದಿದೆಯಾ…?

ಯುವಕ: ಇಲ್ಲ ಸಾರ್! ನಮ್ಮ ತಂದೆಯೇ ಎಲ್ಲಾ ಪೀಜ್ ಕಟ್ಟಿದ್ದಾರೆ….

ಡೈರೆಕ್ಟರ್: ನಿಮ್ಮ ತಾಯಿತಂದೆ ಏನು ಕೆಲಸ ಮಾಡುತ್ತಾರೆ…?

ಯುವಕ: ಕಟ್ಟಿಗೆ ಕಡಿದು ಮಾರಾಟ ಮಾಡುತ್ತಾ ಅದರಿಂದ ಬಂದ ಹಣದಲ್ಲಿ ನನ್ನ ಓದಿಸಿದ್ದಾರೆ.

ಡೈರೆಕ್ಟರ್: ಹಾಗಾದರೆ ಎಲ್ಲಿ ನೀನ್ನ ಕೈಗಳನ್ನು ತೋರಿಸು.

ಯುವಕ: ತನ್ನ ಕೈಗಳನ್ನು ಚಾಚಿದನು….. ಅವು ಮೃದುವಾಗಿ ಸುಂದರವಾಗಿವೆ.

ಡೈರೆಕ್ಟರ್: ನೀನು ಎಂದಾದರೂ ನಿಮ್ಮ ತಂದೆತಾಯಿಗೆ ಕಟ್ಟಿಗೆ ಕಡಿಯುವುದರಲ್ಲಿ ಸಹಾಯ ಮಾಡಿದ್ದೀಯಾ..?

ಯುವಕ: ಇಲ್ಲ ಸಾರ್! ಅವರು ನನಗೆ ಕಷ್ಟಕೊಡದೇ ಚನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕು ಎಂದು ಹೇಳಿದರು. ನಾನು ಹಾಗೆ ಮಾಡಿದೆ.

ಡೈರೆಕ್ಟರ್: ನಿಜವಾಗಿಯೂ ನೀನು ಈ ಕೆಲಸ ಅರ್ಹತೆ ಇರುವವನು. ನನ್ನದೊಂದು ಪುಟ್ಟ ಮನವಿ. ಮಾಡುತ್ತೆನೆಂದರೆ ಹೇಳುತ್ತಾನೆ.

ಯುವಕ: ತಪ್ಪದೆ ಮಾಡುತ್ತೇನೆ ಹೇಳಿ ಸಾರ್…

ಡೈರೆಕ್ಟರ್: ಈದಿನ ನೀನು ಮನೆಗೆ ಹೋದಮೇಲೆ ನಿಮ್ಮ ತಾಯಿತಂದೆಯರ ಕೈಗಳನ್ನು ಶುಭ್ರವಾಗಿ ತೊಳೆದು ಬಾ…! ಆಗ ನೀನು ಈ ಕೆಲಸಕ್ಕೆ ಸೇರಬಹುದು…

ಯುವಕ: ಆಯ್ತು ಸಾರ್…..

ಮನೆಗೆ ಬಂದು ತನ್ನ ತಾಯಿತಂದೆಯರ ಕೈಗಳನ್ನು ತೊಳೆಯಲು ಅವರ ಕೈಗಳನ್ನು ತನ್ನ ಕೈಗೆ ತೆಗೆದುಕೊಂಡ…. ಅವರ ಕೈಗಳನ್ನು ನೋಡಿದ ತಕ್ಷಣ ಕಣ್ಣಿರು ಧಾರಕಾರವಾಗಿ ಸುರಿಯಲಾರಂಭಿಸಿತು… ಆ ಕೈಗಳು ಕಾಯಿಗಟ್ಟಿವೆ… ರಕ್ತ ಸೂಸುತ್ತಾ…. ವರಟಾಗಿವೆ…. ಬಹಳ ಘೊರವಾಗಿ ಕಂಡವು…

ಆ ಕೈಗಳನ್ನು ಹಿಡಿದು ತನ್ನ ಮುಖಕ್ಕೆ ಒತ್ತಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ… ಆ ಯುವಕ ಅವರ ಕಷ್ಟಗಳನ್ನು ನೆನೆದು, ಅವರು ಕಡಿಯಬೇಕಿದ್ದ ಕಟ್ಟಿಗೆಗಳನ್ನು ತಾನೇ ಕಡಿದ.

ಮರುದಿನ ಆಫೀಸಿಗೆ ಹೋಗಿ ಕಣ್ಣಿರಿಡುತ್ತಾ ಆ ಡೈರೆಕ್ಟರ್ ಕಾಲಿಗೆ ಬಿದ್ದು ವಂದಿಸುತ್ತಾ….
“ನೀವು ನನ್ನ ಕಣ್ಣು ತೆರೆಸಿದಿರಿ ಸಾರ್..! ನನ್ನ ತಾಯಿತಂದೆಯರ ಕಷ್ಟಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ಹೇಳಿದಿರಿ…. ನೀವು ನನಗೆ ಉದ್ಯೋಗ ಕೊಟ್ಟರೆ ನಾನು ಅವರು ಚನ್ನಾಗಿ ನೋಡಿಕೊಳ್ಳುತ್ತೇನೆ”.

ಅದಕ್ಕೆ ಆ ಡೈರೆಕ್ಟರ್ ಹೀಗೆ ಹೇಳಿದ….

“ಮನೆಯಲ್ಲಿ ತಾಯಿತಂದೆಯರ ಕಷ್ಟಗಳು ಗೊತ್ತಿರುವವರಿಗೆ ಆಫೀಸಿನಲ್ಲಿ ಮೇಲಾಧಿಕಾರಿಗಳ ಕಷ್ಟಗಳು ಅರ್ಥವಾಗುತ್ತವೆ…. ಅದರಿಂದ ಇತರರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇರುವವರಿಗೆ ಮಾತ್ರ ನಮ್ಮ ಆಫೀಸಿನಲ್ಲಿ ಕೆಲಸ ಕೊಡುವುದೆಂಬುದನ್ನು ಅರ್ಥ ಮಾಡಿಸಲು ನಿನಗೆ ಎಲ್ಲಾ ಅರ್ಹತೆಗಳಿದ್ದರೂ ಈ ಚಿಕ್ಕ ಪರೀಕ್ಷೆ ಇಡಲಾಯಿತು…. ನೀನೆ ಈ ಉದ್ಯೋಗಕ್ಕೆ ಅರ್ಹ ವ್ಯಕ್ತಿ”.

ಹಣ ಖರ್ಚುಮಾಡಿ ನಮ್ಮನ್ನು ಓದಿಸುತ್ತಿದ್ದಾರಲ್ಲ ಎಂದು ಅನವಶ್ಯಕವಾಗಿ ಖರ್ಚುಮಾಡದೇ, ಆ ಫೀಸ್ ಕಟ್ಟಲು ನಮ್ಮ ತಾಯಿತಂದೆಯರು ಪಡುವ ಕಷ್ಟಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚನ್ನಾಗಿ ಓದಿ ಅವರಿಗೆ ಒಳ್ಳೆಯ ಹೆಸರು ತನ್ನಿ….

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button