ಪ್ರಮುಖ ಸುದ್ದಿ
ಅನರ್ಹ ಶಾಸಕರ ಬಗ್ಗೆ ಸಿಎಂ ಯಡಿಯೂರಪ್ಪಗೆ ಡಿಕೆಶಿ ಹೇಳಿದ್ದೇನು?
ಬೆಂಗಳೂರು: ನೀವು ಮತ್ತೆ ಮುಖ್ಯಮಂತ್ರಿಯಾಗಲು ಕಾರಣರಾದ ಅನರ್ಹ ಶಾಸಕರನ್ನು ಕೈಬಿಡಬೇಡಿ. ಅವರಿಗೇ ಏನೆಲ್ಲಾ ಭರವಸೆ ನೀಡಿದ್ದಿರಿ ಅವೆಲ್ಲಾ ಈಡೇರಿಸಿ. ಉತ್ತಮ ಖಾತೆಗಳನ್ನು ನೀಡಿ ನಿಮ್ಮೊಂದಿಗೆ ಇರಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಮೂಲಕ ಹೇಳಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ತೊರೆದು ಮುಂಬೈನಲ್ಲಿರುವ ಶಾಸಕರನ್ನು ಯಡಿಯೂರಪ್ಪ ನಂಬಿಕೊಂಡಿದ್ದಾರೆ. ಅವರೆಲ್ಲಾ ಅಸಾಧ್ಯರು. ಯಡಿಯೂರಪ್ಪ ಅವರ ಬಟ್ಟೆ ಹರೀತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಈ ಹಿಂದೆ ಹೇಳಿದ್ದರು. ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದ್ದಿರಿ. ಇದೀಗ ಅನರ್ಹರಾಗಿರುವ ಶಾಸಕರನ್ನು ತಬ್ಬಲಿ ಮಾಡಬೇಡಿ ಜತೆಗಿಟ್ಟುಕೊಳ್ಳಿ ಎಂದು ಡಿಕೆಶಿ ಹೇಳಿದ್ದಾರೆ.