ಸಿಎಂಗೆ ಸಚಿವ ದರ್ಶನಾಪುರ ಸಲ್ಲಿಸಿದ ಬೇಡಿಕೆ ಏನು ಗೊತ್ತಾ.?
ಸಿಎಂ ಮುಂದೆ ಬೇಡಿಕೆ ಇಟ್ಟ ಸಚಿವ ದರ್ಶನಾಪುರ
ಸಿಎಂಗೆ ಸಚಿವ ದರ್ಶನಾಪುರ ಸಲ್ಲಸಿದ ಬೇಡಿಕೆ ಏನು
ಶಹಾಪುರಃ ಯಾದಗಿರಿ ಜಿಲ್ಲಾ ಅಭಿವೃದ್ಧಿಗೆ ಪ್ರಥಮವಾಗಿ ಕೃಷ್ಣಾ ನೀರಾವರಿ ನಿಗಮ ವ್ಯಾಪ್ತಿಯ ಎಂಬಿಸಿ ಕಾಲುವೆ ದುರಸ್ತಿ ಹಾಗೂ ಆಧುನಿಕತೆಗೆ ಅನುದಾನ ನೀಡಬೇಕಾಗಿದೆ. ಮತ್ತು ಶಹಾಪುರಕ್ಕೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಗೆ 100 ಕೋಟಿ, ಯಾದಗಿರಿ ಭಾಗದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 50 ಕೋಟಿ ಹಾಗೂ ಪಿಡಬ್ಲೂಡಿ ರಸ್ತೆ ಕಾಮಗಾರಿಗೆ ಅನುದಾನ ಸೇರಿದಂತೆ ಮಲ್ಲಾಬಾದ್ ಏತ ನೀರಾವರಿ ಅಭಿವೃದ್ಧಿ ಹಾಗೂ ಜಿಲ್ಲೆಯಲ್ಲಿ ಮಳೆಗಾಲದ ಶಾಲಾ ಕಟ್ಟಡಗಳು ಅಸ್ಥಿರಗೊಂಡಿದ್ದು, ಅವುಗಳ ಪುನರ್ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕಿದೆ ಎಂದು ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸಿಎಂ ಮುಂದೆ ಬೇಡಿಕೆ ಇಟ್ಟರು.
ಬೆಂಗಳೂರಿನಲ್ಲಿ ಸಿಎಂ ಸಿದ್ರಾಮಯ್ಯನವರು ಸಚಿವರೊಂದಿಗೆ ನಡೆಸಿದ ವಿಶೇಷ ಸಭೆಯಲ್ಲಿ ಸಿಎಂ ಅವರೊಂದಿಗೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಮ್ಮ ಬೇಡಿಕೆ ಮುಂದಿಟ್ರು.
ಜೊತೆಗೆ ಅವರು, ಎಂಪಿ ಚುನಾವಣೆ ಸಮೀಪಿಸಿದ್ದು, ಎಲ್ಲಾ ಸಚಿವರು ಶಾಸಕರು ಆಯಾ ತಾಲೂಕು, ಜಿಲ್ಲಾ ಮಟ್ಟದಲ್ಲಿ ಕೆಡಿಪಿ ಸಭೆ ತೆಗೆದುಕೊಳ್ಳಬೇಕು, ಜನತಾ ದರ್ಶನ ನಡೆಸುವ ಮೂಲಕ ಜನರ. ಸಮಸ್ಯೆಗಳಿಗೆ ಸ್ಪಂಧಿಸಲು ಸೂಚಿಸಿದ್ದಾರೆ ಎಂದರು.
ಬಹು. ಮುಖ್ಯವಾಗಿ ಐದು ಗ್ಯಾರಂಟಿಗಳು ಕಟ್ಟ ಕಡೆಯ ವ್ಯಕ್ತಿಗೆ ತಲುಪುಚಂತೆ ನೋಡಿಕೊಳ್ಳಬೇಕು.
ಕೆಲವು ಜಿಲ್ಲೆಗಳಲ್ಲಿ ಗ್ಯಾರಂಟಿ ಯೋಜನೆ ಶೇಕಡವಾರು ಕಡಿಮೆ ಪ್ರಮಾಣವಿದೆ ಅಲ್ಲೆಲ್ಲ ಸಂಪೂರ್ಣ ಯೋಜನೆ ಜನರಿಗೆ ತಲುಪಿಸುವ ಕಾರ್ಯ ಮಾಡುವುದರೊಂದಿಗೆ , ಜನತಾ ದರ್ಶನ ನಡೆಸುವ ಮೂಲಕ ನಾಗರಿಕರ ಸಮಸ್ಯೆಗೆ ಸ್ಪಂದಿಸಿ ಎಂದು ಸಿಎಂ ತಿಳಿಸಿದ್ದಾರೆ ಎಂದು ದರ್ಶನಾಪುರ ಮಾಹಿತಿ ನೀಡಿದರು.